ಇಂದೋರ್: ವ್ಯಕ್ತಿಯೊಬ್ಬ ಆಭರಣದ ಅಂಗಡಿ ಮಾಲೀಕನ ಕಣ್ಣಿಗೆ ಮೆಣಸಿನ ಪುಡಿ ಎರಚಿ ಸುಮಾರು 50 ಗ್ರಾಂ ಚಿನ್ನ ಕದಿಯಲು ಯತ್ನಿಸಿ ಸ್ಥಳೀಯರ ಕೈಗೆ ಸಿಕ್ಕಿಬಿದ್ದು ಪೊಲೀಸರ ಅತಿಥಿಯಾಗಿದ್ದಾನೆ.
ಆಭರಣದಂಗಡಿ ಮಾಲೀಕನ ಕಣ್ಣಿಗೆ ಮೆಣಸಿನ ಪುಡಿ ಎರಚಿ ಚಿನ್ನ ಕದಿಯಲು ಯತ್ನ - ಮಧ್ಯಪ್ರದೇಶದ ಇಂದೋರ್
ಇಂದೋರ್‌ನ ಆಭರಣ ಅಂಗಡಿಯೊಂದರ ಮಾಲೀಕನ ಕಣ್ಣಿಗೆ ಮೆಣಸಿನ ಪುಡಿ ಎರಚಿದ ವ್ಯಕ್ತಿಯೊಬ್ಬ ಚಿನ್ನ ದೋಚಲು ಯತ್ನಿಸಿರುವ ಘಟನೆ ನಡೆದಿದೆ.
ಕಣ್ಣಿಗೆ ಮೆಣಸಿನ ಪುಡಿ ಎರಚಿ ಚಿನ್ನ ಕದಿಯಲು ಯತ್ನ
ಲವೀನ್ ಸೋನಿ ಎಂಬುವವರು ಸರಫಾ ಪ್ರದೇಶದಲ್ಲಿ ಆಭರಣ ಅಂಗಡಿ ನಡೆಸುತ್ತಿದ್ದಾರೆ. ಸಂಜೆ ವೇಳೆ ಬಂದ ಆರೋಪಿ ಆನಂದ್, ಸೋನಿಯ ಕಣ್ಣಿಗೆ ಮೆಣಸಿನ ಪುಡಿ ಎರಚಿದ್ದಾನೆ.
ಘಟನೆಯನ್ನು ಗಮನಿಸಿದ ಸ್ಥಳೀಯರು ಆರೋಪಿಯನ್ನು ಹಿಡಿದು ನಮಗೆ ಒಪ್ಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.