ಕರ್ನಾಟಕ

karnataka

ETV Bharat / bharat

ಐಯ್ ಶಿವಾ,, ಕುರಿಗಾಗಿ ಹೆಂಡ್ತಿಯನ್ನು ಲವರ್​ಗೆ ಬಿಟ್ಕೊಟ್ಟ ಗಂಡ.. ಕೊನೆಗೂ ಪ್ರೀತಿ ಗೆದ್ದಿತು! - ಕುರಿಗಳು ಪಡೆದು ಹೆಂಡ್ತಿ ಕೊಟ್ಟ ಗಂಡ

ವ್ಯಕ್ತಿಯೊಬ್ಬ ಕುರಿಗಳು ಪಡೆದು ತನ್ನ ಹೆಂಡ್ತಿಯನ್ನು ಆಕೆಯ ಲವರ್​ಗೆ ಬಿಟ್ಟು ಕೊಟ್ಟಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಕುರಿಗಾಗಿ ಹೆಂಡ್ತಿಯನ್ನು ಲವರ್​ಗೆ ಬಿಟ್ಟು ಕೊಟ್ಟ ಗಂಡ

By

Published : Aug 19, 2019, 6:58 PM IST

ಗೋರಖ್​ಪುರ್​:ಕುರಿಗಳ ಬದಲಿಗೆ ತನ್ನ ಪತ್ನಿಯನ್ನು ಆಕೆ ಪ್ರೇಮಿಗೆ ನೀಡಲು ಗಂಡನೊಬ್ಬ ಒಪ್ಪಿಕೊಂಡಿರುವ ಅಚ್ಚರಿಯ ಘಟನೆ ಗೋರಖ್​ಪುರ್​ನಲ್ಲಿ ನಡೆದಿದೆ.

ರಾಜೇಶ್​ ಪಾಲ್ ಜೊತೆ ಸೀಮಾ ಪಾಲ್​ನ ಕೆಲವು ದಿನಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಆದರೆ, ಸೀಮಾ ಪಾಲ್​ ಗಂಡನೊಂದಿಗೆ ಸಂಸಾರ ಮಾಡದೇ ಲವರ್​ ಉಮೇಶ್​ ಪಾಲ್​ ಜೊತೆ ಹೋಗಿ ಸಂಸಾರ ನಡೆಸುತ್ತಿದ್ದಾಳೆ. ಈ ಘಟನೆಯಿಂದಾಗಿ ರಾಜೇಶ್​ ಪಾಲ್​ ಪಂಚಾಯ್ತ್‌ ಮೆಟ್ಟಿಲೇರಿದ್ದಾರೆ.

ಮೂವರಿಗೂ ಶಾಶ್ವತ ಪರಿಹಾರ ನೀಡೋದಕ್ಕಾಗಿ ಪಂಚಾಯ್ತ್‌ ಒಂದು ನಿರ್ಧಾರ ಬಂತು. ಚರ್ಚೆಗಳ ಬಳಿಕ ಉಮೇಶ್​ ಪಾಲ್​ ತನ್ನ ಬಳಿಯಿದ್ದ 71 ಕುರಿಗಳನ್ನು ರಾಜೇಶ್​ ಪಾಲ್​ಗೆ ಬಿಟ್ಟು ಕೊಡಲು ಹೇಳಿತು. ಇದರ ಬದಲಾಗಿ ರಾಜೇಶ್​ ಪಾಲ್​ ಉಮೇಶ್​ ಪಾಲ್​ಗೆ ತನ್ನ ಹೆಂಡ್ತಿಯನ್ನು ಬಿಟ್ಟುಕೊಡಲು ತೀರ್ಮಾನಕ್ಕೆ ಬಂದರು. ಪಂಚಾಯ್ತ್‌ ನಿರ್ಣಯಕ್ಕೆ ಮೂವರು ಸಂತೋಷದಿಂದಲೇ ಅಂಗಿಕರಿಸಿದ್ದು ಗಮನಾರ್ಹ.

ಇನ್ನು ಪಂಚಾಯ್ತ್ ನಿರ್ಣಯಕ್ಕೆ ಉಮೇಶ್​ ಪಾಲ್​ ತಂದೆಗೆ ಇಷ್ಟವಾಗಲಿಲ್ಲ. ಪ್ರೇಮಕ್ಕಾಗಿ ಬೆಲೆಬಾಳುವ ಕುರಿಗಳನ್ನು ಬಿಟ್ಟುಕೊಡಲಾಗಿದೆ ಎಂದು ರಾಜೇಶ್​ ಪಾಲ್​ ವಿರುದ್ಧ ಪೊಲೀಸ್​ ಠಾಣೆಯಲ್ಲಿ ದೂರು ಸಲ್ಲಿಸಿದರು. ತನಿಖೆ ಕೈಗೊಂಡ ಪೊಲೀಸರು ರಾಜೇಶ್​ ಪಾಲ್​ ವಿಚಾರಣೆ ನಡೆಸಿದ್ದಾರೆ. ಉಮೇಶ್​ ಪಾಲ್​ ತನ್ನಿಷ್ಟದಂತೆ ಕುರಿಗಳನ್ನು ಬಿಟ್ಟು ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಇನ್ನು, ಪೊಲೀಸರು ಸೀಮಾ ಮನವೊಲಿಕೆಗೆ ಪ್ರಯತ್ನಿಸಿದ್ದಾರೆ. ಆದರೆ, ಸೀಮಾ ರಾಜೇಶ್​ ಪಾಲ್​ ಜೊತೆ ಹೋಗಲು ನಿರಾಕರಿಸಿದ್ದಾರೆ. ಆತನೊಂದಿಗೆ ಸಂಸಾರ ಮಾಡಲು ಇಷ್ಟವಿಲ್ಲವೆಂದು ಸ್ಪಷ್ಟವಾಗಿ ಹೇಳಿದ್ದಾಳೆ. ಈ ಪ್ರಕರಣ ಪಂಚಾಯ್ತಿಯಲ್ಲಿ ಸುಖಾಂತ್ಯ ಕಂಡಿದ್ದು, ಉಮೇಶ್​ ಪಾಲ್​ ತಂದೆಗೆ ಬೇಸರ ಮೂಡಿಸಿದೆ.

ABOUT THE AUTHOR

...view details