ವಿಜಯನಗರಂ:ಕಟ್ಕೊಂಡ್ ಹೆಂಡ್ತಿಯನ್ನು, ಹುಟ್ಟಿದ ಮಗುವನ್ನು ಸರಿಯಾಗಿ ಪೋಷಿಸಲಾಗದೇ ಲಾರಿ ಕ್ಲಿನರ್ನೊಬ್ಬ ತನ್ನ ಜನ್ಮದಿನದಂದೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯನಗರಂ ಜಿಲ್ಲೆಯ ಸಾಲೂರಿನಲ್ಲಿ ನಡೆದಿದೆ.
ಹೌದು, ಕೊಟ್ನಾನ ಲಕ್ಷ್ಮಣರಾವು (30) ಪ್ರೀತಿಸಿ ಮದುವೆಯಾಗಿದ್ದ. ಲಾರಿ ಕ್ಲಿನರ್ ಆಗಿ ಜೀವನ ಸಾಗಿಸುತ್ತಿದ್ದ ಲಕ್ಷ್ಮಣರಾವು ಎರಡು ವರ್ಷದ ಮುದ್ದಾದ ಮಗಳಿದ್ದಾಳೆ. ಇತ್ತಿಚೇಗೆ ಲಾರಿಗೆ ಬಾಡಿಗೆ ಸಿಗದೇ ಇರುವುದರಿಂದ ಲಕ್ಷ್ಮಣರಾವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದನು.
ಇನ್ನು ಲಕ್ಷಣರಾವುಗೆ ಒಂದೊತ್ತು ಕಳೆಯಲು ಕಷ್ಟವಾಗಿತ್ತು. ಗುರುವಾರ ರಾತ್ರಿ ಲಕ್ಷ್ಮಣರಾವು ಕುಟುಂಬ ಸಹಿತಿ ಉತ್ಸವಕ್ಕೆ ತೆರಳಿ ಮನೆಗೆ ವಾಪಸ್ ಆದರು. ಬೀದಿ ನಾಟಕ ನೋಡಲು ಪತ್ನಿ ಕರೆದಿದ್ದಾರೆ. ಆದ್ರೆ ಲಕ್ಷ್ಮಣರಾವು ನೀವು ಪಕ್ಕದ ಮನೆಯವರೊಂದಿಗೆ ಹೋಗಿ ಬನ್ನಿ ಅಂತಾ ಹೇಳಿದ್ದಾನೆ. ಬಳಿಕ ತನ್ನ ಮಗಳ ತೊಟ್ಟಿಲು ಹಗ್ಗದಿಂದ ನೇಣಿಗೆ ಶರಣಾಗಿದ್ದಾನೆ. ನಾಟಕ ಮುಗಿದ ಬಳಿಕ ಗಂಡನನ್ನು ಆ ಸ್ಥಿತಿಯಲ್ಲಿ ನೋಡಿದ ಹೆಂಡ್ತಿಯ ಆಕ್ರಂದನ ಮುಗಿಲು ಮುಟ್ಟಿತ್ತು.
ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.