ಕರ್ನಾಟಕ

karnataka

ETV Bharat / bharat

ಇಬ್ಬರ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಇಟ್ಟ ಆಟೋ ಚಾಲಕ: ಓರ್ವ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ - ಇಬ್ಬರು ವ್ಯಕ್ತಿಗಳ ಮೇಲೆ ಪೆಟ್ರೋಲ್ ಸುರಿದ ಆಟೋ ಚಾಲಕ

ಟೀ ಅಂಗಡಿ ಬಳಿ ನಿಂತಿದ್ದ ಇಬ್ಬರು ವ್ಯಕ್ತಿಗಳ ಮೇಲೆ ಆಟೋ ಚಾಲಕನೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಕೇರಳದಲ್ಲಿ ನಡೆದಿದೆ.

Man succumbs to severe burn injuries
ಪೆಟ್ರೋಲ್ ಎರಚಿ ಬೆಂಕಿ ಇಟ್ಟ ಆಟೋ ಚಾಲಕ

By

Published : May 22, 2020, 4:45 PM IST

ಎರ್ನಾಕುಲಂ(ಕೇರಳ): ಎರ್ನಾಕುಲಂನ ಪಚಲಂನಲ್ಲಿ ಆಟೋ ಚಾಲಕನೊಬ್ಬ ಇಬ್ಬರು ವ್ಯಕ್ತಿಗಳ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದಾನೆ.

ಪೆಟ್ರೋಲ್ ಎರಚಿ ಬೆಂಕಿ ಇಟ್ಟ ಆಟೋ ಚಾಲಕ

2 ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ರಿಜಿನ್ ದಾಸ್(34) ಎಂಬ ವ್ಯಕ್ತಿ ಸಾವಿಗೀಡಾಗಿದ್ದಾನೆ. ಪಂಗಜಕ್ಷನ್ ಎಂಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.

ಫಿಲಿಪ್ ಎಂಬ ಆಟೋ ಚಾಲಕ ಟೀ ಅಂಗಡಿ ಮುಂದೆ ನಿಂತಿದ್ದ ರಿಜಿನ್ ದಾಸ್ ಮತ್ತು ಪಂಗಜಕ್ಷನ್ ಕಡೆಗೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದ. ಆದರೆ, ಕೆಲ ಕ್ಷಣಗಳಲ್ಲೆ ಮತ್ತೆ ವಾಪಸ್ ಬಂದು ಮತ್ತೆ ಕೆಲವರ ಮೇಲೆ ಪೆಟ್ರೋಲ್ ಎರಚಲು ಪ್ರಯತ್ನಿಸಿದ್ದ. ಅಲ್ಲದೇ ತಡೆಯಲು ಬಂದ ಕೆಲವರ ಮೇಲೆ ಹಲ್ಲೆಗೆ ಮುಂದಾಗಿದ್ದ.

ಇದು ಪೂರ್ವಯೋಜಿತ ಕೃತ್ಯವಲ್ಲ. ಆಟೋ ಚಾಲಕ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details