ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯ ಟಾಗೋರ್ ಗಾರ್ಡನ್ ಮೆಟ್ರೋ ರೈಲ್ವೆ ನಿಲ್ದಾಣದಲ್ಲಿ ಯುವಕ ಆತ್ಮಹತ್ಯೆಗೆ ಶರಣಾಗಿದ್ದು, ಸಿಸಿಟಿವಿ ವಿಡಿಯೋ ಭಯಾನಕವಾಗಿದೆ.
ಪಶ್ಚಿಮ ದೆಹಲಿಯ ಟಾಗೋರ್ ಗಾರ್ಡನ್ನ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ. ಮೆಟ್ರೋ ನಿಲ್ದಾಣದ ಬ್ಲೂಲೈನ್ ಮುಂದೆ ಏಕಾಏಕಿ ರೈಲಿಗೆ ತಲೆಕೊಟ್ಟು ಮಲಗಿದ್ದಾನೆ. ಈ ವೇಳೆ ಪ್ಲಾಟ್‌ಫಾರ್ಮ್ ಕಡೆಗೆ ವೇಗವಾಗಿ ಧಾವಿಸಿದ ರೈಲಿಗೆ ಸಿಲುಕಿದ ಆತನ ತಲೆ ಹಾಗು ದೇಹಭಾಗ ಚೂರು ಚೂರಾಗಿದೆ.