ನವದೆಹಲಿ: ಐಪಿಎಲ್ ಬೆಟ್ಟಿಂಗ್‌ನಲ್ಲಿ ಹಣ ಕಳೆದುಕೊಂಡ ವ್ಯಕ್ತಿಯೊಬ್ಬ ತನ್ನ ಇತರ ಇಬ್ಬರು ಸಹಚರರೊಂದಿಗೆ ಸೇರಿ ಉದ್ಯೋಗ ನೀಡಿದ ಸಂಸ್ಥೆಯಿಂದ 25 ಕೆ.ಜಿ ಚಿನ್ನ ಕದ್ದ ಆರೋಪದಡಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು ದೆಹಲಿಯ ಪಶ್ಚಿಮ ವಿನೋದ್ ನಗರ ನಿವಾಸಿಗಳಾದ ಭಾರತ್ ನಾಥ್ಮಲ್ ಸೋನಿ, ಸಚಿನ್ ಶಿಂಧೆ (39) ಮತ್ತು ರಾಜಸ್ಥಾನದ ಸಿರೋಹಿ ಜಿಲ್ಲೆಯ ಶ್ರವಣ್ (39) ಎಂದು ಗುರುತಿಸಲಾಗಿದೆ.
ಜ್ಯುವೆಲ್ಲರಿ ಮುಖ್ಯ ಮಳಿಗೆಯಲ್ಲಿ ಉಸ್ತುವಾರಿ ವಹಿಸಿಕೊಂಡಿದ್ದ ಸೋನಿ ತಮ್ಮ ಕಂಪನಿಯ ಬೇರೊಂದು ಬ್ರಾಂಚ್ ಮಳಿಗೆಗೆ ಚಿನ್ನಭಾರಣ ಸಾಗಿಸದೆ ಕಳ್ಳತನ ಮಾಡಿದ. ಈ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ಸೋನಿ ಪರಾರಿಯಾಗಿದ್ದ. ತನಿಖೆಯ ಸಮಯದಲ್ಲಿ ಸೋನಿ, ಆಗಾಗ ತನ್ನ ಸ್ಥಳ ಬದಲಾಯಿಸುತ್ತಿದ. ಇತ್ತೀಚೆಗೆ ಅವನನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಚಾರಣೆಯಲ್ಲಿ ಸೋನಿ, ಆಭರಣಗಳನ್ನು ಮುಖ್ಯ ಕಚೇರಿಯಿಂದ ಶಾಖಾ ಕಚೇರಿಗೆ ತೆಗದುಕೊಂಡು ಹೋಗದೇ ವಿವಿಧ ಆಭರಣ ವ್ಯಾಪಾರಿಗಳಿಗೆ ಮಾರಾಟ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಐಪಿಎಲ್ ಬೆಟ್ಟಿಂಗ್‌ನಲ್ಲಿ ಸಾಕಷ್ಟು ಹಣ ಕಳೆದುಕೊಂಡಿದ್ದ. ತನ್ನ ನಷ್ಟ ಭರ್ತಿ ಮಾಡಿಕೊಳ್ಳಲು ತಾನು ಕೆಲಸ ಮಾಡುತ್ತಿದ್ದ ಮಳಿಗೆಯಿಂದಲೇ 25.731 ಕಿ.ಗ್ರಾಂ. ನಷ್ಟು ಆಭರಣ ಕದ್ದಿದಾಗಿ ಒಪ್ಪಿಕೊಂಡಿದ್ದಾನೆ ಎಂದು ಡಿಸಿಪಿ ತಿಳಿಸಿದ್ದಾರೆ.