ಕರ್ನಾಟಕ

karnataka

ETV Bharat / bharat

ಇದು ಕೋಳಿ ಜಗಳ: ಚಿಕನ್​ ಬೆಲೆ ಜಾಸ್ತಿ ಹೇಳಿದ್ದಕ್ಕೆ ಮಾರಾಟಗಾರನಿಗೆ ಚಾಕುವಿನಿಂದ ಇರಿದರು

ಕೋಳಿ ಕೊಳ್ಳಲು ಬಂದ ವ್ಯಕ್ತಿ ಮೊದಲು ಕೋಳಿಯ ಬೆಲೆ ಕೇಳಿದ್ದಾನೆ. ಕೋಳಿಯ ಬೆಲೆಯ ಬಗ್ಗೆ ಮಾರಾಟಗಾರ ಸಿರಾಜ್​ ಹೇಳಿದ ನಂತರ, ಮಾರುಕಟ್ಟೆಗಿಂತ ಹೆಚ್ಚಿನ ಬೆಲೆಗೆ ಮಾರುತ್ತಿದ್ದೀಯಾ ಎಂದು ಜಗಳ ಆರಂಭವಾಗಿದೆ. ಈ ಜಗಳ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಸಿರಾಜ್​ಗೆ ಶಾ ಆಲಂ ಎಂಬಾತ ಇರಿದಿದ್ದಾನೆ.

man-stabbed-to-death-over-high-price-of-chicken-in-northwest-delhi
ಕೇವಲ ಚಿಕನ್​ ಬೆಲೆ ಹೆಚ್ಚಿಗೆ ಹೇಳಿದ್ದಕ್ಕೆ ಮಾರುವವನನ್ನೇ ಇರಿದರು!

By

Published : Apr 30, 2020, 10:43 AM IST

ನವದೆಹಲಿ: ಯಾವ್ಯಾವುದೋ ವಿಷಯಕ್ಕೆ ಕೊಲೆ ಮಾಡಿರುವುದನ್ನು ಕೇಳಿರುತ್ತೇವೆ. ಆದರೆ, ಕೋಳಿ ಬೆಲೆ ಹೆಚ್ಚು ಹೇಳಿದ್ದಕ್ಕೆ ಕೊಲೆ ಮಾಡಿರೋದು ವಿಪರ್ಯಾಸೇ ಸರಿ.

ವಾಯುವ್ಯ ದೆಹಲಿಯ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಕೋಳಿ ಬೆಲೆಯ ಬಗ್ಗೆ ವಾಗ್ವಾದ ಉಂಟಾಗಿ 35 ವರ್ಷದ ವ್ಯಕ್ತಿಯನ್ನು ನಾಲ್ಕು ಜನರು ಇರಿದು ಕೊಂದಿದ್ದಾರೆ. ಮೃತನನ್ನು ಸಿರಾಜ್ ಎಂದು ಗುರುತಿಸಲಾಗಿದ್ದು, ಪಶ್ಚಿಮ ಬಂಗಾಳದ ಮದಿನಾಪುರ ಜಿಲ್ಲೆಯ ಕೇಶರಪುರ ಜಲ್ಪೈ ಗ್ರಾಮಕ್ಕೆ ಸೇರಿದವನಾಗಿದ್ದಾನೆ. ಈತ ಮೊದಲು ಮೀನು ಮಾರಾಟ ಮಾಡಿಕೊಂಡು ಜೀವನ ಮಾಡುತ್ತಿದ್ದ. ಲಾಕ್​ಡೌನ್​ ನಂತರ ಜೀವನೋಪಾಯಕ್ಕಾಗಿ ತನ್ನ ಗುಡಿಸಲ ಬಳಿ ಕೋಳಿ ಮಾರಾಟ ಆರಂಭಿಸಿದ್ದ.

ಇನ್ನು ಕೋಳಿ ಕೊಳ್ಳಲು ಬಂದ ವ್ಯಕ್ತಿ ಮೊದಲು ಕೋಳಿಯ ಬೆಲೆ ಕೇಳಿದ್ದಾನೆ. ಕೋಳಿಯ ಬೆಲೆಯ ಬಗ್ಗೆ ಸಿರಾಜ್​ ಹೇಳಿದ ನಂತರ, ಮಾರುಕಟ್ಟೆಗಿಂತ ಹೆಚ್ಚಿನ ಬೆಲೆಗೆ ಮಾರುತ್ತಿದ್ದೀಯಾ ಎಂದು ಜಗಳ ಆರಂಭವಾಗಿದೆ. ಈ ಜಗಳ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಸಿರಾಜ್​ಗೆ ಶಾ ಆಲಂ ಎಂಬಾತ ಇರಿದಿದ್ದಾನೆ. ಇಷ್ಟೇ ಅಲ್ಲ, ಸ್ಥಳಕ್ಕೆ ಬಂದ ಈತನ ಮೂವರು ಸಹೋದರರು ಕೂಡ ಚಾಕುವಿನಿಂದ ಇರಿದು ರಾಡ್​ನಿಂದ ಹಲ್ಲೆ ಮಾಡಿದ್ದಾರೆ.

ಘಟನೆ ನಂತರ ಗಾಯಾಳುವನ್ನು ಮಂಗೋಲ್ಪುರಿಯ ಸಂಜಯ್ ಗಾಂಧಿ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ಅಷ್ಟರಲ್ಲಾಗಲೇ ಶಿರಾಜ್​ ಸಾವಿಗೀಡಾಗಿದ್ದ. ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಿದ್ದು, ಮೂವರಿಗೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಉಪ ಪೊಲೀಸ್ ಆಯುಕ್ತೆ ವಿಜಯಂತ ಆರ್ಯ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details