ಕುಡಲೂರು(ತಮಿಳುನಾಡು): ತನ್ನೊಂದಿಗೆ ಮಾತು ನಿಲ್ಲಿಸಿದ್ದಕ್ಕೆ ಆಕ್ರೋಶಗೊಂಡ ಖಾಸಗಿ ಬಸ್ ನಿರ್ವಾಹಕ 26 ವರ್ಷದ ಮಹಿಳೆಗೆ ಬೆಂಕಿ ಹಚ್ಚಿರುವ ಘಟನೆ ತಮಿಳುನಾಡಿನ ವದಲೂರಿನಲ್ಲಿ ನಡೆದಿದೆ.
ತನ್ನೊಂದಿಗೆ ಮಾತನಾಡಲಿಲ್ಲ ಎಂದು ಮಹಿಳೆಗೆ ಬೆಂಕಿ ಹಚ್ಚಿದ ಬಸ್ ಕಂಡಕ್ಟರ್! - ತಮಿಳುನಾಡು
ತನ್ನೊಂದಿಗೆ ಮಹಿಳೆ ಮಾತನಾಡುವುದನ್ನ ನಿಲ್ಲಿಸಿದ್ದಾಳೆ ಎಂದು ಆಕ್ರೋಶಗೊಂಡ ಖಾಸಗಿ ಬಸ್ ನಿರ್ವಾಹಕನೊಬ್ಬ ಆಕೆಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಹೀಗೆ ಬೆಂಕಿಯಿಂದ ಗಾಯಗೊಂಡಿರುವ ಮಹಿಳೆಯನ್ನ ಜೆ. ಸೆಲೊಮಿ ಎಂದು ಗುರುತಿಸಲಾಗಿದೆ. ಇಬ್ಬರು ಮಕ್ಕಳು ಹೊಂದಿರುವ ಈ ಮಹಿಳೆ ನೈವೇಲಿಯಲ್ಲಿ ವಾಸಿಸುತ್ತಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಈಕೆಯ ಪತಿ ಸೇನೆಯಲ್ಲಿದ್ದು, ಇಬ್ಬರು ಮಕ್ಕಳಿದ್ದಾರೆ. ನಿತ್ಯ ಖಾಸಗಿ ಬಸ್ನಲ್ಲಿ ತೆರಳುತ್ತಿದ್ದಾಗ ಕಂಡೆಕ್ಟರ್ ಆಕೆಯೊಂದಿಗೆ ಮಾತನಾಡುತ್ತಿದ್ದನು. ಈ ವೇಳೆ ಆಕೆಗೆ ತನ್ನ ಮೇಲೆ ಪ್ರೀತಿ ಆಗಿದೆ ಎಂದು ತಪ್ಪಾಗಿ ಭಾವಿಸಿದ್ದಾನೆ. ಈ ವಿಷಯ ಆಕೆಯ ಗಮನಕ್ಕೆ ಬರುತ್ತಿದ್ದಂತೆ ಮಾತನಾಡುವುದನ್ನ ನಿಲ್ಲಿಸಿದ್ದಾಳೆ. ಇದರಿಂದ ಆಕ್ರೊಶಗೊಂಡ ಕಂಡಕ್ಟರ್ ಆಕೆಗೆ ಬೆಂಕಿ ಹಚ್ಚಿದ್ದಾನೆ.
ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರಿಂದ ಶೇ.20ರಷ್ಟು ಸುಟ್ಟು ಹೋಗಿರುವ ಮಹಿಳೆಯನ್ನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಆರೋಪಿಯನ್ನ ಬಂಧನ ಮಾಡಿರುವ ಪೊಲೀಸರು ವಿಚಾರಣೆ ನಡೆಸುತ್ತಿರೋದಾಗಿ ತಿಳಿಸಿದ್ದಾರೆ.