ಜಮ್ಮು/ನವದೆಹಲಿ :ಕೊರೊನಾ ತಡೆ ಹಿನ್ನೆಲೆ ಇಡೀ ದೇಶವೇ ಲಾಕ್ಡೌನ್ ಆಗಿದೆ. ವ್ಯಕ್ತಿಯೊಬ್ಬರು ಕಾಯಿಲೆಯಿಂದ ಬಳಲುತ್ತಿರುವ ತನ್ನ ತಂದೆಯನ್ನು ಭೇಟಿಯಾಗಲು 2100 ಕಿ.ಮೀ ಸೈಕಲ್ ತುಳಿದು ಸಾಗಲು ಹೊರಟಿದ್ದವನಿಗೆ ಸಿಆರ್ಪಿಎಫ್ ನೆರವಾಗಿರುವ ಘಟನೆ ನಡೆದಿದೆ.
ದೇಶದ ಆರ್ಥಿಕ ರಾಜಧಾನಿಯಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿರುವ ಆರೀಫ್ ಎಂಬ ವ್ಯಕ್ತಿಯ ತಂದೆಗೆ ಬಲವಾಗಿ ಲಕ್ವಾ ಹೊಡೆದಿತ್ತು. ತನ್ನ ತಂದೆಯನ್ನು ಕಾಣಲು ಭಾರತ-ಪಾಕಿಸ್ತಾನ ನಿಯಂತ್ರಣ ರೇಖೆಯ ಉದ್ದಕ್ಕೂ ಸಾಗಿ ತನ್ನ ಹಳ್ಳಿಗೆ ಕರೆದೊಯ್ಯುವ ಯಾವುದೇ ಸಾರಿಗೆ ವಿಧಾನವಿಲ್ಲ ಎಂದು ಆತ ತಿಳಿದಿದ್ದ. ಏನಾದರೂ ಪವಾಡವಾಗಿ ತನ್ನ ತಂದೆ ಭೇಟಿಯಾದರೆ ಸಾಕು ಎಂದು ಸೈಕಲ್ ಹತ್ತಿ ಪ್ರಯಾಣ ಶುರು ಮಾಡಿಯೇ ಬಿಟ್ಟ.