ಥಾಣೆ(ಮಹಾರಾಷ್ಟ್ರ) :ಕೆಲ ದಿನಗಳ ಹಿಂದೆ ಇಲ್ಲಿಯ ಭಿವಂಡಿಯಲ್ಲಿ ಮೂರಂತಸ್ತಿನ ಕಟ್ಟಡ ಕುಸಿದು 40ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಆದ್ರೆ ಇದರ ನಡುವೆ ವ್ಯಕ್ತಿಯೊಬ್ಬ ಆಶ್ಚರ್ಯಕರ ರೀತಿಯಲ್ಲಿ ರಕ್ಷಣಾ ಕಾರ್ಯಾಚರಣೆ ವೇಳೆ ಬದುಕಿ ಬಂದಿದ್ದಾನೆ.
ಕಟ್ಟಡದ ಅವಶೇಷಗಳಡಿ 10 ಗಂಟೆಗಳ ಕಾಲ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಿಸಿದ NDRF ಸಿಬ್ಬಂದಿ - Man rescued by NDRF at Bhivandi
ಆಯಸ್ಸು ಗಟ್ಟಿ ಇದ್ರೆ, ಆ ಯಮಧರ್ಮರಾಯ ಬಂದರೂ ಏನೂ ಮಾಡಲು ಸಾಧ್ಯವಿಲ್ಲ ಎಂಬುದಕ್ಕೆ ಈ ವ್ಯಕ್ತಿ ಸಾಕ್ಷಿ. ಕುಸಿದ ಕಟ್ಟಡದ ಅವಶೇಷಗಳಡಿ ಸುಮಾರು 10 ಗಂಟೆಗಳ ಕಾಲ ಸಿಲುಕಿದ್ದ ವ್ಯಕ್ತಿಯನ್ನು ಎನ್ಡಿಆರ್ಎಫ್ ಸಿಬ್ಬಂದಿ ರಕ್ಷಿಸಿದ್ದಾರೆ.

ಆಯಸ್ಸು ಗಟ್ಟಿ ಇದ್ರೆ, ಆ ಯಮಧರ್ಮರಾಯ ಬಂದರೂ ಏನೂ ಮಾಡಲು ಸಾಧ್ಯವಿಲ್ಲ ಎಂಬುದಕ್ಕೆ ಈ ವ್ಯಕ್ತಿ ಸಾಕ್ಷಿ. ಕಟ್ಟಡ ಕುಸಿದು 40 ಜನ ಸಾವನ್ನಪ್ಪಿದ್ದರೂ, ಖಾಲಿದ್ ಎಂಬ ವ್ಯಕ್ತಿಯ ಆಯಸ್ಸು ಮಾತ್ರ ಗಟ್ಟಿ ಇತ್ತು. ಕಟ್ಟಡದ ಅವಶೇಷಗಳಡಿ ಸುಮಾರು 10 ಗಂಟೆಗಳ ಕಾಲ ಸಿಲುಕಿದ್ದ ಈತನನ್ನು ಎನ್ಡಿಆರ್ಎಫ್ ಸಿಬ್ಬಂದಿ ರಕ್ಷಿಸಿದ್ದಾರೆ.
ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ಈತ ವಿಡಿಯೋ ಕಾಲ್ ಕೂಡಾ ಮಾಡಿದ್ದ. ಆ ವೇಳೆ ಕಟ್ಟಡದ ಕೆಲ ಅವಶೇಷಗಳು ತನ್ನ ಮೇಲೆ ಹೇಗೆ ಬಿತ್ತು ಎಂಬುದನ್ನು ಕೂಡಾ ಆತ ವಿವರಿಸಿದ್ದ. ವಿಪತ್ತು ನಿರ್ವಹಣಾ ತಂಡದ ಸಿಬ್ಬಂದಿ ವ್ಯಕ್ತಿ ಎಲ್ಲಿ ಸಿಲುಕಿದ್ದಾನೆ ಎಂಬುದನ್ನು ಪತ್ತೆ ಹಚ್ಚಿ ಆತನನ್ನು ರಕ್ಷಿಸಿದ್ದಾರೆ.