ಕರ್ನಾಟಕ

karnataka

ETV Bharat / bharat

ಅಪ್ರಾಪ್ತೆ ಮೇಲೆ ಅತ್ಯಾಚಾರ: ಜೀವಂತ ಸಮಾಧಿಗೆ ಯತ್ನಿಸಿದ ಕಾಮುಕ! - Nagpur in neighbouring Maharashtra

ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರ ಗಡಿ ಭಾಗದ ಬೆಥುಲ್ ಘೋಡಡೋಂಗ್ರಿ ಪ್ರದೇಶದಿಂದ 12 ಕಿ.ಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ. ಅತ್ಯಾಚಾರದ ಬಳಿಕ ಆಕೆಯನ್ನು ಕೊಲೆ ಮಾಡುವ ದೃಷ್ಟಿಯಿಂದ ಜೀವಂತವಾಗಿ ಸಮಾಧಿ ಮಾಡಲು ಯತ್ನಿಸಿದ್ದಾನೆ. ಬಳಿಕ ಕಲ್ಲುಗಳಿಂದ ಆಕೆಯನ್ನು ಮುಚ್ಚಿ ಅಲ್ಲಿಂದ ಪರಾರಿಯಾಗಿದ್ದಾನೆ.

man-rapes-minor-girl-tries-to-bury-her-alive
ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿ ಕೊಲೆಗೆ ಯತ್ನಿಸಿದ ಕಾಮುಕ

By

Published : Jan 20, 2021, 9:14 PM IST

ನಾಗ್ಪುರ (ಮಹಾರಾಷ್ಟ್ರ): 13 ವರ್ಷದ ಅಪ್ರಾಪ್ತೆ ಮೇಲೆ ವ್ಯಕ್ತಿಯೋರ್ವ ಅತ್ಯಾಚಾರ ಎಸಗಿ ಬಳಿಕ ಜೀವಂತವಾಗಿ ಹೂತು ಹಾಕಲು ಯತ್ನಿಸಿರುವ ಘಟನೆ ನಡೆದಿದೆ.

ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರ ಗಡಿ ಭಾಗದ ಬೆಥುಲ್ ಘೋಡಡೋಂಗ್ರಿ ಪ್ರದೇಶದಿಂದ 12 ಕಿ.ಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ. ಅತ್ಯಾಚಾರದ ಬಳಿಕ ಆಕೆಯನ್ನು ಸಾಯಿಸುವ ದೃಷ್ಟಿಯಿಂದ ಜೀವಂತವಾಗಿ ಸಮಾಧಿ ಮಾಡಲು ಯತ್ನಿಸಿದ್ದಾನೆ. ಬಳಿಕ ಕಲ್ಲುಗಳಿಂದ ಆಕೆಯನ್ನು ಮುಚ್ಚಿ ಅಲ್ಲಿಂದ ಪರಾರಿಯಾಗಿದ್ದಾನೆ.

ಸಾಯುವ ಸ್ಥಿತಿ ತಲುಪಿದ್ದ ಅಪ್ರಾಪ್ತೆಯನ್ನು ಹುಡುಕುತ್ತಾ ಬಂದಿದ್ದ ಕುಟುಂಬಸ್ಥರಿಗೆ ಅಪ್ರಾಪ್ತೆ ನರಳುವ ಸದ್ದು ಕೇಳಿಸಿದೆ. ತಕ್ಷಣ ಆಕೆಯನ್ನು ರಕ್ಷಿಸಿ ಮಹಾರಾಷ್ಟ್ರದ ನಾಗ್ಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯಲ್ಲಿ ಆಕೆಯ ಮುಖದ ಮೂಳೆ ಮುರಿದಿದ್ದು, ಕಿವಿಗೆ ಹಾನಿಯಾಗಿದೆ. ಜಮೀನಿನಲ್ಲಿದ್ದ ಮೋಟಾರ್​​ನಲ್ಲಿ ಸಮಸ್ಯೆ ಉಂಟಾಗಿರುವುದನ್ನು ಪರೀಕ್ಷಿಸಲು ತೆರಳಿದ ವೇಳೆ ದುಷ್ಕರ್ಮಿ ಆಕೆಯ ಮೇಲೆರಗಿದ್ದಾನೆ. ಬಳಿಕ ಕೃತ್ಯ ಮರೆಮಾಚಲು ಆರೋಪಿ ಆಕೆಯ ಕೊಲೆಗೂ ಯತ್ನಿಸಿದ್ದಾನೆ ಎಂದು ಎಸ್​ಪಿ ಸಿಮಲಾ ಪ್ರಸಾದ್ ತಿಳಿಸಿದ್ದಾರೆ.

ಈ ಘಟನೆ ಸಂಬಂಧ 35 ವರ್ಷದ ಆರೋಪಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ:ಅತ್ಯಾಚಾರ ಸಂತ್ರಸ್ತರ ಅಪ್ರಾಪ್ತ ಮಕ್ಕಳಿಗೆ ಉಚಿತ ಶಿಕ್ಷಣ : ಸುಪ್ರೀಂಕೋರ್ಟ್​

ABOUT THE AUTHOR

...view details