ಕರ್ನಾಟಕ

karnataka

ETV Bharat / bharat

ಏಳು ವರ್ಷದ ಮಗಳ ಮೇಲೆ ದುಷ್ಟ ತಂದೆಯಿಂದ ಅತ್ಯಾಚಾರ - ರಾಜಸ್ಥಾನ ಸುದ್ದಿ

ಕುಡಿದ ಮತ್ತಿನಲ್ಲಿ ಕಾಮುಕ ತಂದೆಯೋರ್ವ ಮಗಳ ಮೇಲೆ ಅತ್ಯಾಚಾರವೆಸಗಿರುವ ಅಮಾನವೀಯ ಘಟನೆ ರಾಜಸ್ತಾನದಲ್ಲಿ ನಡೆದಿದೆ.

Man rapes daughter in Rajasthan
Man rapes daughter in Rajasthan

By

Published : Jul 15, 2020, 8:53 PM IST

ಜೈಪುರ​ ​:ಮದ್ಯ ಸೇವಿಸಿ ಮನೆಗೆ ಬರುವ ಪತಿ ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದುದನ್ನು ತಾಳಲಾರದೆ ಪತ್ನಿ ತವರು ಮನೆ ಹೋಗಿದ್ದಳು. ಅಲ್ಲಿಗೂ ತೆರಳಿದ ಕಾಮುಕ ತಂದೆ ತನ್ನ 7 ವರ್ಷದ ಮಗಳ ಮೇಲೆಯೇ ಅತ್ಯಾಚಾರ ಎಸಗಿದ್ದಾನೆ.

ಈ ಘಟನೆ ರಾಜಸ್ಥಾನದ ಉದಯಪುರದಲ್ಲಿ ನಡೆದಿದೆ. ಈಗಾಗಲೇ ಪಾಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

ಟೆಂಪೋ ಚಾಲಕನಾಗಿದ್ದ ಗಂಡ ಪ್ರತಿದಿನ ಕಂಠಪೂರ್ತಿ ಕುಡಿದು ಬಂದು ಹೆಂಡತಿ ಜತೆ ಜಗಳವಾಡುತ್ತಿದ್ದ. ಹೀಗಾಗಿ ಕಳೆದ ಕೆಲ ದಿನಗಳ ಹಿಂದೆ ಆಕೆ ಮಗಳೊಂದಿಗೆ ತವರು ಮನೆಗೆ ಹೋಗಿದ್ದಾಳೆ. ರಾತ್ರಿ ಅಲ್ಲಿಗೆ ತೆರಳಿರುವ ಕಾಮುಕ ಮಗಳನ್ನು ಕರೆದುಕೊಂಡು ಸೋದರನ ಮನೆಯಲ್ಲಿ ಬಿಟ್ಟಿದ್ದಾನೆ. ಅದಾದ ಬಳಿಕ ಆಕೆಯನ್ನು ಕರೆದುಕೊಂಡು ಹೋಗಿ ಟೆಂಪೋದಲ್ಲಿ ಅತ್ಯಾಚಾರವೆಸಗಿದ್ದಾನೆ.

ಸಂತ್ರಸ್ತೆಯ ಸಂಬಂಧಿಕರು ಹಾಗೂ ತಾಯಿ ದೂರು ನೀಡಿದ್ದು, POCSO ಕಾಯ್ದೆಯಡಿ ಆರೋಪಿ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.

ABOUT THE AUTHOR

...view details