ಕರ್ನಾಟಕ

karnataka

ETV Bharat / bharat

ಗುರುಗ್ರಾಮ್ : ಆಸ್ಪತ್ರೆಯ ಆವರಣದೊಳಗೆ ಪಿಕಪ್ ಟ್ರಕ್ ನುಗ್ಗಿಸಿದ ವ್ಯಕ್ತಿ - ಬಾಲಾಜಿ ಆಸ್ಪತ್ರೆ

ವಿಷಯ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ, ಆರೋಪಿ ಅಲ್ಲಿಂದ ತಪ್ಪಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ..

gurugram
ಗುರುಗ್ರಾಮ್: ಆಸ್ಪತ್ರೆಯ ಆವರಣದೊಳಗೆ ಪಿಕಪ್ ಟ್ರಕ್ ನುಗ್ಗಿಸಿದ ವ್ಯಕ್ತಿ

By

Published : Dec 20, 2020, 4:59 PM IST

ಗುರುಗ್ರಾಮ್​ :ವ್ಯಕ್ತಿಯೋರ್ವ ಪಿಕಪ್ ಟ್ರಕ್ ವಾಹನವನ್ನು ಆಸ್ಪತ್ರೆಯ ಆವರಣದೊಳಗೆ ನುಗ್ಗಿಸಿರುವ ಆಘಾತಕಾರಿ ಘಟನೆ ಬಸಾಯಿ ಚೌಕ್‌ನ ಬಾಲಾಜಿ ಆಸ್ಪತ್ರೆಯಲ್ಲಿ ನಡೆದಿದೆ.

ಘಟನೆಯಲ್ಲಿ ಓರ್ವ ಗಾಯಗೊಂಡಿದ್ದಾನೆ. ಇಬ್ಬರು ವೃದ್ಧ ರೋಗಿಗಳ ಚಿಕಿತ್ಸೆಗೆ ಸಂಬಂಧಿಸಿದಂತೆ ಕುಟುಂಬ ಸದಸ್ಯರ ನಡುವಿನ ಜಗಳ ಈ ಘಟನೆಗೆ ಕಾರಣ ಎನ್ನಲಾಗ್ತಿದೆ. ಚಾಲಕ ಇಬ್ಬರು ರೋಗಿಗಳ ಸಂಬಂಧಿಯಾಗಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೆಡಿಕಲ್​ ಶಾಪ್‌ ಸೇರಿದಂತೆ 10 ರಿಂದ 15 ವಾಹನಗಳು ಹಾನಿಗೊಂಡಿವೆ ಎಂದು ಬಾಲಾಜಿ ಆಸ್ಪತ್ರೆಯ ನಿರ್ದೇಶಕ ಡಾ.ಬಲ್ವಾನ್ ಸಿಂಗ್ ಹೇಳಿದ್ದಾರೆ. ವಿಷಯ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ, ಆರೋಪಿ ಅಲ್ಲಿಂದ ತಪ್ಪಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ.

ABOUT THE AUTHOR

...view details