ಕರ್ನಾಟಕ

karnataka

ETV Bharat / bharat

ಹನಿಮೂನ್​ನಲ್ಲಿ ಸಾಹಸ... ಪತ್ನಿ ಕಣ್ಣೆದುರೇ ಪ್ರಾಣ ಬಿಟ್ಟ ಪತಿ! - ಕುಲ್ಲುನಲ್ಲಿ ಪ್ಯಾರಾಗ್ಲೈಡಿಂಗ್​ನಿಂದ ಬಿದ್ದು ಚೆನ್ನೈ ಪ್ರವಾಸಿಗ ಸಾವು

ಹನಿಮೂನ್​ಗಾಗಿ ಹಿಮಾಚಲ ಪ್ರದೇಶದ ಕುಲ್ಲುಗೆ ಹೋಗಿದ್ದ ನವಜೋಡಿಯೊಂದರ ಬಾಳಲ್ಲಿ ವಿಧಿ ಆಟವಾಡಿದೆ.

ವಧುವಿನ ಕಣ್ಣೆದುರೇ ಪ್ರಾಣಬಿಟ್ಟ ವರ

By

Published : Nov 19, 2019, 5:17 PM IST

Updated : Nov 19, 2019, 5:44 PM IST

ಕುಲ್ಲು:ಮುದವೆಯಾಗಿ ಇನ್ನು ಸರಿಯಾಗಿ 10 ದಿನಗಳು ಕಳೆದಿಲ್ಲ ಆ ಜೋಡಿಗೆ. ಹನಿಮೂನ್​ಗೆಂದು ಕೂಲ್​ ಕೂಲ್​ ಪ್ರದೇಶವಾದ ಹಿಮಾಚಲಕ್ಕೆ ಬಂದಿದ್ದರು. ಆದ್ರೆ ವಿಧಿ ಅವರ ಬಾಳಲ್ಲಿ ಆಟವಾಡಿದೆ.

ವಧುವಿನ ಕಣ್ಣೆದುರೇ ಪ್ರಾಣಬಿಟ್ಟ ವರ

ತಮಿಳುನಾಡಿನ ಚೆನ್ನೈನ ಅಮಿಂಗಿಕರ್ತ್​ ನಿವಾಸಿ ಅರವಿಂದ್​ (27) ಎಂಬಾತನಿಗೆ ಪ್ರೀತಿ ಎಂಬಾಕೆ ಜೊತೆ ನವೆಂಬರ್​ 10ರಂದು ಮದುವೆಯಾಗಿತ್ತು. ಹನಿಮೂನ್​ಗೆಂದು ಇವರಿಬ್ಬರು ಕುಲ್ಲುಗೆ ಬಂದಿದ್ದರು. ಪ್ಯಾರಾ ಗ್ಲೈಡಿಂಗ್ ಆಡಲು ಅರವಿಂದ್​ ಆಸೆ ಪಟ್ಟಿದ್ದು, ಅದರಂತೆ ಪ್ಯಾರಾ ಗ್ಲೈಡಿಂಗ್ ಆಡಲು ತೆರಳಿದ್ದಾನೆ.

ಸ್ವಲ್ಪ ಸಮಯದ ಬಳಿಕ ಪ್ಯಾರಾ ಗ್ಲೈಡಿಂಗ್ ಅವಘಡಕ್ಕೆ ಗುರಿಯಾಗಿದೆ. ಪ್ರೀತಿ ನೋಡುತ್ತಿದ್ದಂತೆ ಅರವಿಂದ್​ ಮತ್ತು ಪ್ಯಾರಾ ಗ್ಲೈಡಿಂಗ್ ಪೈಲೆಟ್​ ಮೇಲಿಂದ ಕೆಳಗೆ ಬಿದ್ದಿದ್ದಾರೆ. ಅರವಿಂದ್​ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪ್ಯಾರಾ ಗ್ಲೈಡಿಂಗ್ ಪೈಲೆಟ್​ ಗಾಯಗೊಂಡಿದ್ದಾನೆ.

ಈ ಘಟನೆ ಬಗ್ಗೆ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.

Last Updated : Nov 19, 2019, 5:44 PM IST

ABOUT THE AUTHOR

...view details