ಕರ್ನಾಟಕ

karnataka

ETV Bharat / bharat

ಇಸ್ರೋ ವಿಜ್ಞಾನಿ ಎಂದು ನಂಬಿಸಿ PhD ವಿದ್ಯಾರ್ಥಿನಿ ಮದ್ವೆಯಾದ ಭೂಪ!

ಭಾರತೀಯ ಬಾಹ್ಯಾಕಾಶ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಕೆಲಸ ನಿರ್ವಹಿಸುತ್ತಿರುವುದಾಗಿ ಸುಳ್ಳು ಹೇಳಿ ಒಪ್ಪಿಸಿರುವ ವ್ಯಕ್ತಿ ಮದುವೆಯಾಗಿರುವ ಘಟನೆ ನಡೆದಿದೆ.

ಸಾಂದರ್ಭಿಕ ಚಿತ್ರ

By

Published : Oct 5, 2019, 9:14 PM IST

ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿ ವಿಚಿತ್ರ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ತಾನು ಭಾರತೀಯ ಬಾಹ್ಯಾಕಾಶ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವೆ ಎಂದು ಬಣ್ಣದ ಮಾತುಗಳಿಂದ ಮೋಸ ಮಾಡಿ ವಿವಾಹವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಹುಡುಗಿ ನೋಡಲು ತೆರಳಿದ್ದಾಗ ತಾನು ಇಸ್ರೋ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿರುವೆ ಎಂದು ಸುಳ್ಳು ಐಡಿ ಕಾರ್ಡ್​ ಹಾಗೂ ಕೆಲ ನಕಲಿ ದಾಖಲೆ ತೋರಿಸಿದ್ದಾನೆ. ಆತನ ಬಣ್ಣದ ಮಾತುಗಳಿಗೆ ಬೆರಗಾದ ಯುವತಿ ಕುಟುಂಬಸ್ಥರು ಹಿಂದೆ ಮುಂದೆ ನೋಡದೇ ತಮ್ಮ ಮಗಳನ್ನು ಮದುವೆ ಮಾಡಿಕೊಟ್ಟಿದ್ದಾರೆ.

ನವದೆಹಲಿಯ ದ್ವಾರಕಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮೋಸ ಮಾಡಿರುವ ವ್ಯಕ್ತಿಯನ್ನು ಜೀತೇಂದ್ರ ಎಂದು ಗುರುತಿಸಲಾಗಿದೆ. ಕಳೆದ ಮೇ ತಿಂಗಳಲ್ಲಿ ಇವರ ಮದುವೆ ನಡೆದಿದ್ದು, ಈ ವೇಳೆ ತಾನು ಡಿಆರ್​ಡಿಓದಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿದ್ದು, ಆದಷ್ಟು ಬೇಗ ನಾಸಾಗೆ ಪ್ರಯಾಣ ಬೆಳೆಸುವುದಾಗಿ ಹೇಳಿದ್ದಾನೆ. ಅದರಂತೆ ಒಂದು ದಿನ ಯುಎಸ್​ಗೆ ಪ್ರಯಾಣ ಬೆಳೆಸುವುದಾಗಿ ಹೇಳಿ ಮನೆಯಿಂದ ಹೊರಬಿದ್ದಿದ್ದಾನೆ. ಈ ಮಾತು ಕೇಳಿರುವ ಆತನ ಹೆಂಡತಿ ಅನುಮಾನಕ್ಕೊಳಗಾಗಿದ್ದಾಳೆ.

ಒಂದು ದಿನ ಕಳೆದ ಬಳಿಕ ಆತನ ಮೊಬೈಲ್​ ನಂಬರ್​​ ಲೊಕೇಷನ್​ ಚೆಕ್​ ಮಾಡಿದಾಗ ಆತ ಗುರುಗ್ರಾಮ್​​ನಲ್ಲಿ ತನ್ನ ಕುಟುಂಬದೊಂದಿಗೆ ಇರುವುದು ಗೊತ್ತಾಗಿದೆ. ತಕ್ಷಣವೇ ಗಂಡನ ವಿರುದ್ಧ ಹೆಂಡತಿ ದ್ವಾರಕಾನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

ABOUT THE AUTHOR

...view details