ಪುಣೆ (ಮಹಾರಾಷ್ಟ್ರ): ಅಮೆರಿಕದಲ್ಲಿ ಲಸಿಕೆ ತಯಾರಿಸಲು ಅಗತ್ಯವಿರುವ ತೈಲ ಭಾರತದಲ್ಲಿದೆ, ಅದನ್ನು ಖರೀದಿಸಿ ನಮಗೆ ಕಳಿಸಿ ಎಂದು ಸುಳ್ಳು ಹೇಳಿಕೊಂಡು ಕರೆ ಮಾಡಿದ ಆನ್‌ಲೈನ್ ವಂಚಕರು, ರಿಯಲ್ ಎಸ್ಟೇಟ್ ಉದ್ಯಮಿಗೆ 38.50 ಲಕ್ಷ ರೂ. ವಂಚಿಸಿದ್ದಾರೆ.
ಫೆಬ್ರವರಿ ಮತ್ತು ಏಪ್ರಿಲ್ ನಡುವಿನ 14 ವಿಭಿನ್ನ ವಹಿವಾಟುಗಳಲ್ಲಿ ರಿಯಲ್ ಎಸ್ಟೇಟ್ ಡೆವಲಪರ್ ಹಣ ಕಳೆದುಕೊಂಡಿದ್ದಾನೆ ಎಂದು ಸ್ವರ್ಗೇಟ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕ್ಯಾಲಿಫೋರ್ನಿಯಾ ಮೂಲದ ಸಂಸ್ಥೆಯೊಂದರಲ್ಲಿ ತಾನು ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಂಡು ಮಹಿಳೆಯೊಬ್ಬಳು ಸಾಮಾಜಿಕ ಜಾಲತಾಣದ ಮೂಲಕ ಉದ್ಯಮಿಯ ಸಂಪರ್ಕಕ್ಕೆ ಬಂದಿದ್ದಳು. ಬಳಿಕ ಲಸಿಕೆ ತಯಾರಿಕೆಯಲ್ಲಿ ಬೇಕಾಗುವ ತೈಲವು ಭಾರತದಲ್ಲಿ ಮಾತ್ರ ದೊರೆಯುತ್ತಿದ್ದು, ಅದನ್ನು ಒದಗಿಸುವಂತೆ ಕೇಳಿದ್ದಳು.
ಭಾರತದಲ್ಲಿ ತೈಲದ ವ್ಯವಹಾರ ಮಾಡುತ್ತಿದ್ದಾನೆ ಎಂದು ಹೇಳಿ ವ್ಯಕ್ತಿಯೊಬ್ಬನ ಮೊಬೈಲ್ ನಂಬರನ್ನು ಉದ್ಯಮಿಗೆ ನೀಡಲಾಗಿತ್ತು. ಬಳಿಕ ಆ ವ್ಯಕ್ತಿಯ ಕಡೆಯಿಂದ ವಿವಿಧ ಕಂತುಗಳಲ್ಲಿ 38.50 ಲಕ್ಷ ರೂಪಾಯಿ ನೀಡುವಂತೆ ಕೇಳಲಾಗಿತ್ತು.
ತಾನು ಮೋಸ ಹೋಗಿದ್ದೇನೆಂದು ತಿಳಿದ ಬಳಿಕ ರಿಯಲ್ ಎಸ್ಟೇಟ್ ಉದ್ಯಮಿ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.