ಮುಂಬೈ:ಕಾಮುಕ ವ್ಯಕ್ತಿಯೋರ್ವ ಅಂಗಡಿಗೆ ಬಂದ ಮಹಿಳೆಯ ಕೊಲೆ ಮಾಡಿ, ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿರುವ ಅಮಾನವೀಯ ಘಟನೆ ಮಹಾರಾಷ್ಟ್ರದ ಪಾಲ್ಗರ್ನಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಶಿವ ಚೌಧರಿ ಬಂಧಿತ ಆರೋಪಿ. ಪ್ರಿಯಾಂಕ ಕಾಂಪ್ಲೆಕ್ಸ್ನಲ್ಲಿ ಅಂಗಡಿ ಇಟ್ಟುಕೊಂಡಿದ್ದ ಈ ವ್ಯಕ್ತಿಯ ಶಾಪ್ಗೆ ವಸ್ತುಗಳ ಖರೀದಿಗೆಂದು ಬಂದಿದ್ದ ಮಹಿಳೆಯನ್ನ ಕೊಲೆಗೈದು ಈ ರೀತಿಯ ಕೃತ್ಯವೆಸಗಿದ್ದಾನೆ. ಇದಾದ ಬಳಿಕ ಆಕೆಯ ಮೃತದೇಹ ಮುಚ್ಚಿ ಹಾಕಿದ್ದಾನೆ.
ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಕಾಮುಕ! ಮನೆಯಲ್ಲಿ ಹೆಂಡತಿ ಕಾಣದ ಕಾರಣ ಮೃತ ಮಹಿಳೆಯ ಗಂಡ ಪೊಲೀಸರಿಗೆ ದೂರು ನೀಡಿದ್ದಾನೆ. ಈ ವೇಳೆ ವಸ್ತು ಖರೀದಿ ಮಾಡಲು ಅಂಗಡಿಗೆ ತೆರಳಿದ್ದಳು ಎಂಬ ಮಾಹಿತಿ ನೀಡಿದ್ದಾನೆ. ಇದರ ಆಧಾರದ ಮೇಲೆ ಅಂಗಡಿ ಮಾಲೀಕನ ವಿಚಾರಣೆ ನಡೆಸಲಾಗಿದ್ದು, ಸತ್ಯಾಂಶ ಬಯಲಾಗಿದೆ. ಆರಂಭದಲ್ಲಿ ಆಕೆಯ ಮೇಲೆ ಹಲ್ಲೆ ನಡೆಸಿದ್ದು, ಕೂದಲು ಹಿಡಿದು ಶಾಪ್ ಹಿಂದೆ ಎಳೆದೊಯ್ದು ನಾಲಿಗೆ ಕತ್ತರಿಸಿ ಕೊಲೆ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಇದಾದ ಬಳಿಕ ಮೃತದೇಹದ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ.
ಜೂನ್ 27ರಂದು ಮೃತದೇಹವನ್ನ ಕಾರಿನಲ್ಲಿಟ್ಟುಕೊಂಡು ಅರ್ಧ ಕಿಲೋ ಮೀಟರ್ ದೂರ ಹೋಗಿ ಮುಚ್ಚಿ ಹಾಕಿದ್ದಾನೆ. ಮೃತದೇಹ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿದಾಗ ಆಕೆಯ ಶವದ ಮೇಲೆ ಅತ್ಯಾಚಾರ ನಡೆದಿರುವುದು ಖಚಿತಗೊಂಡಿದೆ. ಕಳೆದ ಒಂದು ವರ್ಷದಿಂದ ಅಂಗಡಿ ಮಾಲೀಕ ಮನೆಯಲ್ಲಿ ಒಬ್ಬನೇ ವಾಸವಾಗಿದ್ದು, ಈತನ ಹೆಂಡತಿ, ಮಕ್ಕಳು ಪಕ್ಕದ ಊರಿನಲ್ಲಿ ಜೀವನ ನಡೆಸುತ್ತಿದ್ದಾರೆ ಎನ್ನಲಾಗಿದೆ.