ಕರ್ನಾಟಕ

karnataka

ETV Bharat / bharat

ಪಟಾಕಿ ಹೊತ್ತೊಯ್ಯುತ್ತಿದ್ದ ಬೈಕ್​ ಡಿವೈಡರ್​ಗೆ ಡಿಕ್ಕಿ: ಯುವಕ ಸಾವು - ಈಟಿವಿ ಭಾರತದ ಸುದ್ದಿಗಳು

ಪಟಾಕಿ ತಂದ ಆಪತ್ತಿನಿಂದ ಯುವಕನೊಬ್ಬ ಮೃತಪಟ್ಟಿದ್ದಾನೆ. ಬೈಕ್​ನಲ್ಲಿ ಪಟಾಕಿ ತೆಗೆದುಕೊಂಡು ಹೋಗುತ್ತಿದ್ದಾಗ ಡಿವೈಡರ್​ಗೆ ಬೈಕ್‌‌ ಡಿಕ್ಕಿಯಾಗಿದ್ದು ಡಿಕ್ಕಿಯ ರಭಸರಕ್ಕೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯಿಂದ ಹೊರಬರಲಾದ ಯುವಕ ಸುಟ್ಟ ಗಾಯದಿಂದ ಮೃತಪಟ್ಟಿದ್ದಾನೆ.

Man killed, sister injured as bike caught fire
ಸಾಂದರ್ಭಿಕ ಚಿತ್ರ

By

Published : Oct 3, 2020, 10:05 PM IST

ಉನ್ನಾವೊ : ಪಟಾಕಿಯ ಬಂಡಲ್​ ಹೊತ್ತೊಯ್ಯುತ್ತಿದ್ದ ಯುವಕನೋರ್ವ ನಿಯಂತ್ರಣ‌‌ ತಪ್ಪಿ ಡಿವೈಡರ್​ಗೆ ಬೈಕ್‌‌ ಡಿಕ್ಕಿಯಾಗಿ ಮೃತಪಟ್ಟ ಘಟನೆ ಉನ್ನಾವೊದಲ್ಲಿ ನಡೆದಿದೆ. ದುರ್ಘಟನೆಯಲ್ಲಿ ಆತನ ಸಹೋದರಿ ಗಂಭೀರವಾಗಿ ಗಾಯಗೊಂಡಿದ್ದಾಳೆ ಎನ್ನಲಾಗುತ್ತಿದೆ.

ಬೈಕ್​ನಲ್ಲಿ ಒಂದು ಕಟ್ಟು ಪಟಾಕಿ ತೆಗೆದುಕೊಂಡು ಹೋಗುತ್ತಿದ್ದ ಯುವಕ, ನಿಯಂತ್ರಣ‌‌ ತಪ್ಪಿ ಡಿವೈಡರ್​ಗೆ ಡಿಕ್ಕಿ ಹೊಡೆದಿದ್ದಾನೆ. ಬೈಕ್​ನಲ್ಲಿ ಪಟಾಕಿ ಇದ್ದುದರಿಂದ ಡಿಕ್ಕಿ ರಭಸಕ್ಕೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ನೋಡ ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಇಡೀ ಬೈಕ್​ಗೆ ಆರಿಸಿದೆ. ದುರ್ಘಟನೆಯಲ್ಲಿ ಬೈಕ್​ ಸವಾರ ಮೃತಪಟ್ಟಿದ್ದು, ಆತನ ಸಹೋದರಿ ರೋಶ್ನಿಗೆ ಗಂಭೀರ ಸುಟ್ಟ ಗಾಯಗಳಾಗಿವೆ.

ಅ. 2 ರಂದು ಮುಂಜಾನೆ ಸಹೋದರ ಮತ್ತು ಸಹೋದರಿ ಇಬ್ಬರು ಬೈಕ್​ನಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪುರ್ವಾ ಸರ್ಕಲ್ ಅಧಿಕಾರಿ ರಮೇಶ್ ಕುಮಾರ್ ಪ್ರಲಯಂಕರ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ. ಮೃತ ವ್ಯಕ್ತಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ರೋಶ್ನಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ABOUT THE AUTHOR

...view details