ನವದೆಹಲಿ:ವಿಮೆ ಹಣಕ್ಕಾಗಿ ವ್ಯಾಪಾರಿಯೊಬ್ಬ ಸುಪಾರಿ ಕೊಟ್ಟು ತನ್ನ ಕೊಲೆ ಮಾಡಿಸಿಕೊಂಡಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದ್ದು, ಇದೀಗ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ತನ್ನ ಕುಟುಂಬಕ್ಕೆ ವಿಮೆ ಹಣ ಸಿಗುವ ಉದ್ದೇಶದಿಂದ ನಾಲ್ವರಿಗೆ ತನ್ನನ್ನು ಕೊಲೆ ಮಾಡುವಂತೆ ಹೇಳಿದ್ದಾನೆ. ಆತನ ಶವ ವಶಕ್ಕೆ ಪಡೆಸಿಕೊಂಡಿರುವ ತನಿಖೆ ನಡೆಸಿದಾಗ ಸತ್ಯಾಂಶ ಹೊರಬಿದ್ದಿದೆ.
ಸತ್ಯಾಂಶ ಗೊತ್ತಾಗಿದ್ದು ಹೀಗೆ!
ವಿಮೆ ಹಣಕ್ಕಾಗಿ ಮರ್ಡರ್ ಮಾಡಿಸಿಕೊಂಡ ವ್ಯಕ್ತಿ ವ್ಯಕ್ತಿಯ ಮೃತದೇಹ ಮರದ ಕೊಂಬೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ವೇಳೆ ಆತನ ಎರಡು ಕೈ ಕಟ್ಟಿ ಹಾಕಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ್ದ ಗೌರವ್ ಹೆಂಡತಿ, ತನ್ನ ಗಂಡ 6 ಲಕ್ಷ ರೂ ಸಾಲ ತೆಗೆದುಕೊಂಡಿದ್ದಾಗಿ ಕೇಳಿಕೊಂಡಿದ್ದಳು.
ಈತನ ಮೊಬೈಲ್ ಫೋನ್ ವಶಕ್ಕೆ ಪಡೆದು ಚೆಕ್ ಮಾಡಿದಾಗ ಅಪ್ರಾಪ್ತನೊಂದಿಗೆ ಮೇಲಿಂದ ಮೇಲೆ ಮಾತನಾಡಿ, ತನ್ನ ಮರ್ಡರ್ ಮಾಡಲು ಸೂಚಿಸಿದ್ದ ವಿಷಯ ಬಹಿರಂಗಗೊಂಡಿದೆ. ಜತೆಗೆ ತನ್ನ ಭಾವಚಿತ್ರ ಕಳುಹಿಸಿಕೊಟ್ಟಿದ್ದನು.
ಅದರಂತೆ ಜೂನ್ 9ರಂದು ಈತನ ಕೊಲೆ ಮಾಡಿರುವ ಆರೋಪಿಗಳು, ಕೈ ಕಟ್ಟಿ ಹಾಕಿ, ಮರಕ್ಕೆ ನೇಣು ಬಿಗಿದು ಪರಾರಿಯಾಗಿದ್ದಾರೆ. ಮೊಬೈಲ್ ನಂಬರ್ ಆಧಾರದ ಮೇಲೆ ಅವರನ್ನು ಗುರುತಿಸಿ ಇದೀಗ ವಶಕ್ಕೆ ಪಡೆದುಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆರೋಪಿಗಳನ್ನ ಮನೋಜ್ ಕುಮಾರ್, ಸೂರಜ್, ಸುಮಿತ್ ಕುಮಾರ್ ಎಂದು ಗುರುತಿಸಲಾಗಿದ್ದು, ಓರ್ವ ಅಪ್ರಾಪ್ತ ಕೂಡ ಕೃತ್ಯದಲ್ಲಿ ಭಾಗಿಯಾಗಿದ್ದಾನೆ.