ಕರ್ನಾಟಕ

karnataka

ETV Bharat / bharat

ಸ್ನೇಹಿತನ ಜನ್ಮದಿನಕ್ಕೆ ನೀಡಿದ ಖಡ್ಗದಿಂದಲೇ ಹತ್ಯೆಗೀಡಾದ ಯುವಕ! - ಮುಂಬೈ ಕೊಲೆ

ನಖೀಲ್ ತನ್ನ ಖಡ್ಗವನ್ನು ಹಿಂತಿರುಗಿಸುವಂತೆ ಸಬೀರ್​ನನ್ನು ಒತ್ತಾಯಿಸಿದ್ದಾನೆ. ಖಡ್ಗ ಹಿಂತಿರುಗಿಸದಿದ್ದರೆ, 3,000 ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದ. ಆದರೆ ಸಬೀರ್ ಅದನ್ನು ಕೊಡಲು ನಿರಾಕರಿಸಿ, ಕೋಪದಿಂದ ನಖೀಲ್​ಗೆ ಅದೇ ಖಡ್ಗದಿಂದ ಹಲ್ಲೆ ಮಾಡಿ ಕೊಂದಿದ್ದಾನೆ.

murder
murder

By

Published : Sep 4, 2020, 2:23 PM IST

ಮುಂಬೈ:ಸ್ನೇಹಿತನ ಜನ್ಮದಿನದಂದು ಆತನಿಗೆ ಖಡ್ಗ ನೀಡಿದ ಯುವಕ ಅದೇ ಖಡ್ಗದಿಂದ ಹತ್ಯೆಗೀಡಾಗಿರುವ ಘಟನೆ ನಡೆದಿದೆ.

ನಖೀಲ್ ಖಾನ್ (19) ತನ್ನ ಸ್ನೇಹಿತ ಸಬೀರ್ ಶೇಖ್ (19) ಜನ್ಮದಿನದಂದು ಆತನಿಗೆ ಖಡ್ಗ ನೀಡಿದ್ದನು. ಆದರೆ ಜನ್ಮದಿನ ಕಳೆದು ಹಲವು ದಿನಗಳ ನಂತರವೂ ಸಬೀರ್ ಆ ಖಡ್ಗವನ್ನು ನಖೀಲ್‌ಗೆ ಹಿಂದಿರುಗಿಸಿರಲಿಲ್ಲ.

ನಿನ್ನೆ ರಾತ್ರಿ ಮುಂಬೈನ ಆಂಟಾಪ್ ಹಿಲ್ ಪ್ರದೇಶದಲ್ಲಿ ಇಬ್ಬರೂ ಭೇಟಿಯಾಗಿದ್ದಾರೆ. ಆಗ ನಖೀಲ್ ತನ್ನ ಖಡ್ಗವನ್ನು ಹಿಂತಿರುಗಿಸುವಂತೆ ಸಬೀರ್​ನನ್ನು ಒತ್ತಾಯಿಸಿದ್ದಾನೆ. ಖಡ್ಗ ಹಿಂತಿರುಗಿಸದಿದ್ದರೆ, 3,000 ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದ.

ಆದರೆ ಸಬೀರ್ ನಿರಾಕರಿಸಿ, ಕೋಪದಿಂದ ನಖೀಲ್​ಗೆ ಅದೇ ಖಡ್ಗದಿಂದ ಹಲ್ಲೆ ಮಾಡಿದ್ದಾನೆ. ಇದರಿಂದ ನಖೀಲ್ ಮೃತಪಟ್ಟಿದ್ದು, ಪೊಲೀಸರು ಸಬೀರ್‌ನನ್ನು ವಶಕ್ಕೆ ಪಡೆದಿದ್ದಾರೆ.

ABOUT THE AUTHOR

...view details