ಸೋನಾಬದ್ರ(ಯುಪಿ): ಹಸುವಿನ ಮೂತ್ರ ಸೇವನೆಯಿಂದ ಅನೇಕ ರೋಗಗಳು ಗುಣಮುಖವಾಗುತ್ತವೆ ಅನ್ನೋದು ಜನರ ನಂಬಿಕೆ.
ಸಗಣಿಯಿಂದಲೇ ಸ್ನಾನ, ಗೋಮೂತ್ರ ಸೇವನೆ: ಇದು ಈ ವ್ಯಕ್ತಿಯ ಆರೋಗ್ಯದ ಗುಟ್ಟಂತೆ! - ಹಸುವಿನ ಮೂತ್ರ ಸೇವನೆ
ಸರ್ಕಾರಿ ನೌಕರನಾಗಿ ಕೆಲಸ ಮಾಡುತ್ತಿರುವ ವ್ಯಕ್ತಿಯೋರ್ವ ಕಳೆದ ಕೆಲ ವರ್ಷಗಳಿಂದ ಸಗಣಿ ಹಚ್ಚಿಕೊಂಡು ಸ್ನಾನ ಮಾಡ್ತಿದ್ದು, ಗೋಮೂತ್ರ ಸೇವನೆ ಮಾಡುತ್ತಿದ್ದಾರೆ.
ಉತ್ತರಪ್ರದೇಶದ ಸೋಬಾಬದ್ರದ ಬಿಚ್ಚಿ ಗ್ರಾಮದಲ್ಲಿ ವಾಸವಾಗಿರುವ ವ್ಯಕ್ತಿ ಘನಶ್ಯಾಮ್ ಸರ್ಕಾರಿ ನೌಕರನಾಗಿದ್ದು ಕಳೆದ ಅನೇಕ ವರ್ಷಗಳಿಂದ ಹಸುವಿನ ಸಗಣಿಯಿಂದಲೇ ಸ್ನಾನ ಮಾಡ್ತಿದ್ದಾರೆ. ಜೊತೆಗೆ ನಿರಂತರ ಗೋಮೂತ್ರ ಸೇವನೆಯನ್ನೂ ಮಾಡುತ್ತಿದ್ದಾರೆ. ಹೀಗಾಗಿ ಕಳೆದ ಅನೇಕ ವರ್ಷಗಳಿಂದ ಯಾವುದೇ ರೀತಿಯ ಅನಾರೋಗ್ಯಕ್ಕೊಳಗಾಗಿಲ್ಲ ಎಂದು ತಿಳಿಸಿದ್ದಾರೆ. ಜತೆಗೆ ಜನರು ಕೂಡ ಈ ರೀತಿಯಾಗಿ ನಡೆದುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
2016-17ರಿಂದಲೂ ತಾವು ಈ ರೀತಿಯಾಗಿ ಮಾಡುತ್ತಿದ್ದು, ದೇಹದ ತುಂಬ ಹಸುವಿನ ಸಗಣಿ ಹಚ್ಚಿಕೊಂಡ ಬಳಿಕ ಸುಮಾರು 10 ನಿಮಿಷಗಳ ಕಾಲ ಬಿಟ್ಟು ಸ್ನಾನ ಮಾಡುವುದರಿಂದ ಯಾವುದೇ ಚರ್ಮ ರೋಗ ಬರುವುದಿಲ್ಲ. ತಾವು ಹಾಲು ಸೇವನೆ ಮಾಡುವುದಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ಗೋಮೂತ್ರ ಸೇವಿಸುವುದಾಗಿ ತಿಳಿಸಿದ್ದಾರೆ.