ವಡೋದರಾ:ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾದ ಬಳಿಕ ರಸ್ತೆ ನಿಯಮ ಮೀರುವ ವಾಹನ ಸವಾರರು ಸಾವಿರಾರು ರೂಪಾಯಿ ದಂಡ ಕಟ್ಟುತ್ತಿದ್ದು, ತಮ್ಮ ವಾಹನ ಹೊರ ತೆಗೆದು ರಸ್ತೆ ಮೇಲೆ ಸವಾರಿ ನಡೆಸಲು ಹಿಂದೇಟು ಹಾಕ್ತಿದ್ದಾರೆ. ಈ ಮಧ್ಯೆ ಗುಜರಾತ್ನ ವಡೋದರದ ನಿವಾಸಿ ವಿಚಿತ್ರವಾದ ಪ್ರಯೋಗದೊಂದಿಗೆ ರಸ್ತೆಗಿಳಿದಿದ್ದಾರೆ.
ಸುಮ್ನೆ ಕಿರಿಕಿರಿ ಏಕೆ? ಹೆಲ್ಮೆಟ್ನಲ್ಲೇ ದಾಖಲೆಗಳನ್ನು ಅಂಟಿಸಿಕೊಂಡ ಬೈಕ್ ಸವಾರ!
ಹೊಸ ಟ್ರಾಫಿಕ್ ನಿಯಮ ಜಾರಿಗೆ ಬಂದಾಗಿನಿಂದ್ಲೂ ಟ್ರಾಫಿಕ್ ನಿಯಮ ಉಲ್ಲಂಘಿಸುತ್ತಿರುವ ವಾಹನ ಸವಾರರು ಸಾವಿರಾರು ರೂಪಾಯಿ ಹಣವನ್ನು ದಂಡದ ರೂಪದಲ್ಲಿ ತೆರುತ್ತಿದ್ದಾರೆ. ಆದ್ರೆ, ಇಲ್ಲೊಬ್ಬ ವ್ಯಕ್ತಿ ಯಾವುದೇ ಕಿರಿಕಿರಿ ಆಗದಂತೆ ವಿಶೇಷ ರೀತಿಯಲ್ಲಿ ನಿಗಾ ವಹಿಸಿದ್ದಾರೆ.
ರಾಯಲ್ ಎನ್ಫೀಲ್ಡ್ ಬೈಕ್ ಹೊಂದಿರುವ ಆರ್ ಶಾ, ರಸ್ತೆಗಿಳಿಯುವ ವೇಳೆ ತಾವು ಹಾಕಿಕೊಳ್ಳುವ ಹೆಲ್ಮೆಟ್ನ ಸುತ್ತಲೂ ಡ್ರೈವಿಂಗ್ ಲೈಸನ್ಸ್,ಇನ್ಸೂರೆನ್ಸ್, ಆರ್ಸಿ ಬುಕ್ ಸೇರಿದಂತೆ ಎಲ್ಲ ದಾಖಲಾತಿಗಳನ್ನು ಹಚ್ಚಿಕೊಂಡಿದ್ದಾರೆ. ಬೈಕ್ ಮೇಲೆ ಸವಾರಿ ಮಾಡುವಾಗ ಚಾಚೂ ತಪ್ಪದೇ ನಾನು ಹೆಲ್ಮೆಟ್ ಹಾಕಿಕೊಳ್ಳುವುದರಿಂದ ಅದರ ಮೇಲೆ ಈ ಎಲ್ಲಾ ದಾಖಲಾತಿ ಅಂಟಿಸಿದ್ದೇನೆ ಎಂದು ಹೇಳಿದ್ರು.
ಇಲ್ಲಿಯವರೆಗೂ ತಾವು ಯಾವುದೇ ದಂಡ ಪಾವತಿಸಿಲ್ಲ ಎಂದು ಅವರು ತಿಳಿಸಿದ್ದು, ಹೊಸ ಕಾಯ್ದೆಯಿಂದ ನನಗೆ ಟ್ರಾಫಿಕ್ ಪೊಲೀಸರು ತೊಂದರೆ ಕೊಟ್ಟಿಲ್ಲ ಎಂದು ನಿರಾಳತೆ ವ್ಯಕ್ತಪಡಿಸಿದ್ರು.