ಭಿಂಡ್(ಮಧ್ಯಪ್ರದೇಶ): ಅಕ್ರಮ ಸಂಬಂಧ ಹೊಂದಿದ್ದಾರೆಂದು ಹೆಂಡತಿ ಹಾಗೂ ವ್ಯಕ್ತಿಯೋರ್ವನ ಗುಂಡಿಕ್ಕಿ ಕೊಲೆ ಮಾಡಿರುವ ಗಂಡ ತದನಂತರ ತಲೆಮರೆಸಿಕೊಂಡಿರುವ ಘಟನೆ ನಡೆದಿದೆ.
ಅಕ್ರಮ ಸಂಬಂಧ ಶಂಕೆ: ಹೆಂಡ್ತಿ ಹಾಗೂ ವ್ಯಕ್ತಿಯ ಗುಂಡಿಕ್ಕಿ ಕೊಂದ ಗಂಡ! - ಅಕ್ರಮ ಸಂಬಂಧ ಶಂಕೆ
ಅಕ್ರಮ ಸಂಬಂಧ ಹೊಂದಿರುವ ಶಂಕೆ ವ್ಯಕ್ತಪಡಿಸಿ ಕಟ್ಟಿಕೊಂಡ ಹೆಂಡತಿ ಹಾಗೂ ಓರ್ವ ವ್ಯಕ್ತಿಯನ್ನ ಗಂಡನೋರ್ವ ಕೊಲೆ ಮಾಡಿರುವ ಘಟನೆ ನಡೆದಿದೆ.
ಮಧ್ಯಪ್ರದೇಶದ ಭಿಂಡ್ನಲ್ಲಿ ಈ ಘಟನೆ ನಡೆದಿದ್ದು, ಆನಂದ್ ಯಾದವ್ ತನ್ನ ಪತ್ನಿ ಸರೋಜ್ನನ್ನ ಗುಂಡಿಕ್ಕಿ ಕೊಂದಿದ್ದು, ತದನಂತರ ಹರಿಓಂ ಅಗರವಾಲ್ ಎಂಬ ವ್ಯಕ್ತಿಯನ್ನು ಅಪರಿಚಿತ ವ್ಯಕ್ತಿಯ ಸಹಾಯದಿಂದ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ತಲೆಮರೆಸಿಕೊಂಡಿರುವ 30 ವರ್ಷದ ಆನಂದ್ ಯಾದವ್ಗೋಸ್ಕರ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಸಿಂಗ್ ಕಾಂಚನ್ ತಿಳಿಸಿದ್ದಾರೆ. ತನ್ನ 25 ವರ್ಷದ ಪತ್ನಿ ಸರೋಜಾ ಮತ್ತು ಅಗರವಾಲ್ ಅಕ್ರಮ ಸಂಬಂಧ ಹೊಂದಿದ್ದಾರೆಂದು ಶಂಕೆ ವ್ಯಕ್ತಪಡಿಸಿ ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿದು ಬಂದಿದೆ.