ಆಂಧ್ರಪ್ರದೇಶ:ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಂದು ಯುವಕನೋರ್ವ ದಾಂಪತ್ಯ ಜೀವನಕ್ಕೆ ಕಾಲಿಡಬೇಕಿತ್ತು. ಆದರೆ ವಿಧಿಬರಹವೇ ಬೇರೆಯಾಗಿತ್ತು.
ಮದುವೆಯ ಹಿಂದಿನ ದಿನವೇ ಇಹಲೋಕ ತ್ಯಜಿಸಿದ ವರ - ವಿಶಾಖಪಟ್ಟಣಂನ ಮದ್ದುಲಾಬಂದ
ಇಂದು ಹಸೆಮಣೆ ಏರಬೇಕಿದ್ದ ಯುವಕನೋರ್ವ ವಿದ್ಯುತ್ ತಂತಿ ತಗುಲಿ ನಿನ್ನೆ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯಲ್ಲಿ ನಡೆದಿದೆ.
ಮದುವೆಯ ಹಿಂದಿನ ದಿನವೇ ಇಹಲೋಕ ತ್ಯಜಿಸಿದ ವರ
ಹೌದು, ಇಂದು ಹಸೆಮಣೆ ಏರಬೇಕಿದ್ದ ಯುವಕನೋರ್ವ ವಿದ್ಯುತ್ ತಂತಿ ತಗುಲಿ ನಿನ್ನೆ ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣಂನ ಮದ್ದುಲಾಬಂದ ಗ್ರಾಮದಲ್ಲಿ ನಡೆದಿದೆ. ಜನಾರ್ಧನ್ ಮೃತ ಯುವಕ.
ಮನೆಗೆ ವಿದ್ಯುತ್ ಸಂಪರ್ಕವನ್ನು ಪರೀಕ್ಷಿಸಲು ಸೋಮವಾರ ಜನಾರ್ಧನ್ ವಿದ್ಯುತ್ ಕಂಬವನ್ನು ಹತ್ತಿದ್ದಾನೆ. ಈ ವೇಳೆ ತಂತಿ ತಗುಲಿ ಕರೆಂಟ್ ಶಾಕ್ ಹೊಡೆದಿದೆ. ಪ್ರಥಮ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಬದುಕುಳಿಯಲಿಲ್ಲ.