ಖಾಂದ್ವಾ (ಮಧ್ಯಪ್ರದೇಶ): ಹೊಲದಲ್ಲಿ ಮೇಕೆ ಮೇಯ್ದ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ವ್ಯಕ್ತಿ ಸಾವನ್ನಪ್ಪಿದ ಘಟನೆ ಖಾಂದ್ವಾ ಜಿಲ್ಲೆಯ ಹಪ್ಲಾ ಗ್ರಾಮದಲ್ಲಿ ನಡೆದಿದೆ. ಈ ಘರ್ಷಣೆಗೆ ಸಂಬಂಧಿಸಿದಂತೆ 19 ಜನರನ್ನು ಬಂಧಿಸಲಾಗಿದೆ.
ಮೇಕೆ ಮೇಯ್ದ ವಿಚಾರಕ್ಕೆ ಘರ್ಷಣೆ, ಓರ್ವ ಕೊಲೆ..! - ಮೇಕೆ ಮೇಯುವಿಕೆ
ಮೇಕೆ ಮೇಯುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಓರ್ವ ವ್ಯಕ್ತಿ ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
![ಮೇಕೆ ಮೇಯ್ದ ವಿಚಾರಕ್ಕೆ ಘರ್ಷಣೆ, ಓರ್ವ ಕೊಲೆ..! person murdered](https://etvbharatimages.akamaized.net/etvbharat/prod-images/768-512-7439504-thumbnail-3x2-raa.jpg)
ವ್ಯಕ್ತಿ ಕೊಲೆ
ಈ ಕುರಿತು ಪ್ರತಿಕ್ರಿಯೆ ನೀಡಿರುವ ಖಾಂದ್ವಾ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಸಿಂಗ್ "ನಾವು 19 ಜನರನ್ನು ಬಂಧಿಸಿದ್ದೇವೆ, ಉಳಿದವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು. ಇದಕ್ಕಾಗಿ ತಂಡ ರಚಿಸಲಾಗಿದ್ದು, ಕಾರ್ಯತಂತ್ರ ರೂಪುಗೊಳ್ಳುತ್ತಿದೆ'' ಎಂದು ಸ್ಪಷ್ಟಪಡಿಸಿದ್ದಾರೆ.
ಜೊತೆಗೆ ಈ ಸಂಬಂಧ ಭಾರತೀಯ ದಂಡ ಸಂಹಿತೆಯ ಐಪಿಸಿ ಸೆಕ್ಷನ್ 307, 302, 148, 149ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ