ಕರೀಂನಗರ(ತೆಲಂಗಾಣ):ಆಸ್ಪತ್ರೆಯು ತನ್ನ ಮಗಳ ಶವ ಸಾಗಿಸಲು ಆ್ಯಂಬುಲೆನ್ಸ್ ಒದಗಿಸಿಲ್ಲ ಎಂದು ಆರೋಪಿಸಿ, ಸ್ವತಃ ತಂದೆಯೇ ತನ್ನ 7 ವರ್ಷದ ಮಗಳ ಶವವನ್ನು ಹೊತ್ತು ಸಾಗಿಸಿದ ಘಟನೆ ಕರೀಂನಗರದಲ್ಲಿ ನಡೆದಿದೆ.
ಆ್ಯಂಬುಲೆನ್ಸ್ ಕೊಡದ ಆರೋಪ... ಮಗಳ ಶವ ಕೈಯಲ್ಲೇ ಹೊತ್ತು ಸಾಗಿದ ಅಪ್ಪ - ambulance
ತನ್ನ ಮಗಳ ಶವ ಸಾಗಿಸಲು ಆಸ್ಪತ್ರೆಯು ಆ್ಯಂಬುಲೆನ್ಸ್ ಒದಗಿಸಿಲ್ಲ ಎಂದು ಆರೋಪಿಸಿ, ತಂದೆಯೇ ತನ್ನ ಮಗಳ ಶವವನ್ನು ಹೊತ್ತು ಸಾಗಿಸಿದ ಘಟನೆ ನೆರೆಯ ತೆಲಂಗಾಣದ ಕರೀಂನಗರದಲ್ಲಿ ನಡೆದಿದೆ. ಆದರೆ ಈ ಆರೋಪವನ್ನು ಕರೀಂನಗರ ಸರ್ಕಾರಿ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳು ತಳ್ಳಿ ಹಾಕಿದ್ದಾರೆ.
Man carries child
ಇಲ್ಲಿನ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಆದರೆ, ಆಸ್ಪತ್ರೆಯ ವೈದ್ಯಾಧಿಕಾರಿ ಅಜಯ್ ಕುಮಾರ್ ಈ ಆರೋಪವನ್ನು ತಳ್ಳಿಹಾಕಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಬಾಲಕಿಯನ್ನು ಕಳೆದ ಆಗಸ್ಟ್ 31ರಂದು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಎರಡೂ ಕಿಡ್ನಿಗಳ ವೈಫಲ್ಯದಿಂದಾಗಿ ಚಿಕಿತ್ಸೆ ಫಲಕಾರಿಯಾಗದೇ ಸೆಪ್ಟೆಂಬರ್ 1ರಂದು ಬಾಲಕಿ ಸಾವನ್ನಪ್ಪಿದ್ದಾಳೆ.
ಆದರೆ, ಬಾಲಕಿಯ ತಂದೆ ಆಸ್ಪತ್ರೆಗೆ ಯಾವುದೇ ವಿಷಯ ತಿಳಿಸದೇ ಮಗಳ ಶವವನ್ನು ತೆಗೆದುಕೊಂಡು ಹೋಗಿದ್ದಾರೆ. ಅವರು ನಮ್ಮಲ್ಲಿ ಆ್ಯಂಬುಲೆನ್ಸ್ ಕೂಡಾ ಕೇಳಿಲ್ಲ ಎಂದು ಅಜಯ್ ಹೇಳಿದ್ದಾರೆ.