ಕರ್ನಾಟಕ

karnataka

ETV Bharat / bharat

ಆ ಧರ್ಮದ ವ್ಯಕ್ತಿ ತರುವ ಊಟ ಬೇಡ ಎಂದ ಗ್ರಾಹಕ: ಜೊಮೊಟೊ ನೀಡಿದ ಉತ್ತರವೇನು? - ಅನ್ಯ ಧರ್ಮ

ತಾನು ಆರ್ಡರ್​ ಮಾಡಿದ್ದ ಊಟವನ್ನು ತರುತ್ತಿರುವ ಡೆಲಿವರಿ ಬಾಯ್​ ಹಿಂದೂ ಅಲ್ಲ. ಆದ ಕಾರಣ ನನ್ನ ಆರ್ಡರ್ ಅನ್ನು ಕ್ಯಾನ್ಸಲ್ ಮಾಡುತ್ತಿದ್ದೇನೆ ಎಂದು ವ್ಯಕ್ತಿಯೊಬ್ಬ ಕಾರಣ ನೀಡಿದ್ದಾನೆ. ಇದಕ್ಕೆ ಸರಿಯಾಗೆ ಟಾಂಗ್ ನೀಡಿರುವ ಜೊಮೊಟೊ,ಆಹಾರಕ್ಕೆ ಧರ್ಮ ಎಂಬುದಿಲ್ಲ. ಅದೇ ಒಂದು ಧರ್ಮ ಎಂದೂ ಜೊಮೊಟೊ ಹೇಳಿದೆ.

Zomato

By

Published : Jul 31, 2019, 3:37 PM IST

ನವದೆಹಲಿ: ಜೊಮೊಟೊ ಡೆಲಿವರಿ ಬಾಯ್​ ಹಿಂದೂ ಧರ್ಮದವನಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಆರ್ಡರ್​ ಕ್ಯಾನ್ಸಲ್ ಮಾಡಿರುವ ಘಟನೆ ಭಾರಿ ಸುದ್ದಿಯಾಗುತ್ತಿದೆ.

ತಾನು ಆರ್ಡರ್​ ಮಾಡಿದ್ದ ಊಟವನ್ನು ತರುತ್ತಿರುವ ಡೆಲಿವರಿ ಬಾಯ್​ ಹಿಂದೂ ಅಲ್ಲ. ಆದ ಕಾರಣ ನನ್ನ ಆರ್ಡರ್ ಅನ್ನು ಕ್ಯಾನ್ಸಲ್ ಮಾಡುತ್ತಿದ್ದೇನೆ ಎಂದು ವ್ಯಕ್ತಿಯೊಬ್ಬ ಕಾರಣ ನೀಡಿದ್ದಾನೆ.

ಇದಕ್ಕೆ ಸರಿಯಾಗೇ ಟಾಂಗ್ ನೀಡಿರುವ ಜೊಮೊಟೊ, ಡೆಲಿವರಿ ಬಾಯ್​ನನ್ನು ಬದಲಾಯಿಸಲಾಗದು ಹಾಗೂ ಆರ್ಡರ್​ ಕ್ಯಾನ್ಸಲ್ ಮಾಡುವ ಇಲ್ಲವೇ, ರೀಫಂಡ್​ ಸಹ ಮಾಡಲಾಗದು ಎಂದಿದೆ.

ಅಲ್ಲದೆ, ಟ್ವಿಟರ್​ ಮೂಲಕ, ಆಹಾರಕ್ಕೆ ಧರ್ಮ ಎಂಬುದಿಲ್ಲ. ಅದೇ ಒಂದು ಧರ್ಮ ಎಂದೂ ಜೊಮೊಟೊ ಹೇಳಿದೆ.

237 ರೂ. ಮೌಲ್ಯದ ಆರ್ಡರ್​ ಮಾಡಿದ ವ್ಯಕ್ತಿ, ಜೊಮೊಟೊ ತನ್ನ ಆ್ಯಪ್ ಮೂಲಕ ಆರ್ಡರ್​ ದಾಖಲೆ ಪಡೆಯುವುದನ್ನು ಬ್ಲಾಕ್ ಮಾಡಿದೆ ಎಂದೂ ಆರೋಪಿಸಿದ್ದಾನೆ. ಆ್ಯಪ್ ಅನ್ನು ಮೊಬೈಲ್​ನಿಂದ ಡಿಲಿಟ್ ಮಾಡಿ, ಕಾನೂನು ಹೋರಾಟ ನಡೆಸಲು ವಕೀಲರ ಜತೆ ಮಾತನಾಡುವುದಾಗಿಯೂ ಬರೆದುಕೊಂಡಿದ್ದಾನೆ.

ಈ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ನಡೆಯುತ್ತಿದ್ದು, ಬಹುತೇಕರು ಜೊಮೊಟೊ ಪರ ಧ್ವನಿ ಎತ್ತಿದ್ದಾರೆ.

ABOUT THE AUTHOR

...view details