ಲಖನೌ:ಉತ್ತರ ಪ್ರದೇಶದ ಲಖನೌನಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನದ ಅಂಗವಾಗಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಇದ್ದಕ್ಕಿದ್ದಂತೆ ವ್ಯಕ್ತಿಯೊಬ್ಬ ವೇದಿಕೆ ಮೇಲಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಬಳಿ ಓಡಿ ಬಂದಿದ್ದು, ಇದನ್ನು ಕಂಡ ಪ್ರಿಯಾಂಕ ಅರೆಕ್ಷಣ ಹೌಹಾರಿದ್ದಾರೆ.
ಇದ್ದಕ್ಕಿದ್ದಂತೆ ಪ್ರಿಯಾಂಕ ಗಾಂಧಿ ಬಳಿ ಓಡಿ ಬಂದ ವ್ಯಕ್ತಿ... ಮುಂದೇನಾಯ್ತು ಗೊತ್ತೇ? - ಇದ್ದಕ್ಕಿದ್ದಂತೆ ಪ್ರಿಯಾಂಕ ಗಾಂಧಿ ಬಳಿ ಓಡಿ ಬಂದ ವ್ಯಕ್ತಿ
ಲಖನೌನಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನದ ಅಂಗವಾಗಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಇದ್ದಕ್ಕಿದ್ದಂತೆ ವ್ಯಕ್ತಿಯೊಬ್ಬ ವೇದಿಕೆ ಮೇಲಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾರನ್ನು ಭೇಟಿ ಮಾಡಲೆಂದು ಬಿಗಿ ಭದ್ರತೆಯ ನಡುವೆಯೂ ನಿಯಮ ಉಲ್ಲಂಘಿಸಿ ಓಡಿ ಬಂದಿದ್ದಾನೆ.
![ಇದ್ದಕ್ಕಿದ್ದಂತೆ ಪ್ರಿಯಾಂಕ ಗಾಂಧಿ ಬಳಿ ಓಡಿ ಬಂದ ವ್ಯಕ್ತಿ... ಮುಂದೇನಾಯ್ತು ಗೊತ್ತೇ? Congress foundation day](https://etvbharatimages.akamaized.net/etvbharat/prod-images/768-512-5520528-thumbnail-3x2-megha.jpg)
ಬಿಗಿ ಭದ್ರತೆಯ ನಡುವೆಯೂ ನಿಯಮ ಉಲ್ಲಂಘಿಸಿ ವ್ಯಕ್ತಿ ಪ್ರಿಯಾಂಕ ಗಾಂಧಿ ಬಳಿ ಅವರನ್ನು ಭೇಟಿಯಾಗಲೆಂದು ಓಡಿ ಬಂದಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಗಣ್ಯರು ಶಾಕ್ ಆಗಿದ್ದು, ಭದ್ರತಾ ಸಿಬ್ಬಂದಿ ಆತನನ್ನು ಎಳೆದೊಯ್ಯಲು ಪ್ರಯತ್ನಿಸಿದ್ದಾರೆ. ಆದರೆ ಪ್ರಿಯಾಂಕ ಗಾಂಧಿ ಅವರನ್ನು ತಡೆದು ತಾಳ್ಮೆಯಿಂದ ತಮ್ಮನ್ನು ಭೇಟಿಯಾಗಲು ಬಂದ ವ್ಯಕ್ತಿಯನ್ನು ಮಾತನಾಡಿಸಿ ಕಳುಹಿಸಿದ್ದಾರೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತನ್ನ 135ನೇ ಸಂಸ್ಥಾಪನಾ ದಿನವಾದ ಇಂದು ದೇಶಾದ್ಯಂತ ಮೆರವಣಿಗೆಗಳನ್ನು ಕೈಗೊಂಡಿದೆ. ದೆಹಲಿಯ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಐಸಿಸಿ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಧ್ವಜಾರೋಹಣ ನೆರವೇರಿಸಿದ್ದರು.