ಕರ್ನಾಟಕ

karnataka

ETV Bharat / bharat

ಮಾಜಿ ಲವರ್​​ ಖಾಸಗಿ ಫೋಟೋ ಇಟ್ಟುಕೊಂಡು ಬ್ಲಾಕ್​ಮೇಲ್​​... 5 ಲಕ್ಷ ರೂ.ಗೆ ಬೇಡಿಕೆಯಿಟ್ಟ ಭೂಪ! - ಮಹಾರಾಷ್ಟ್ರದ ಸುದ್ದಿ

ಮದುವೆ ಪ್ರಸ್ತಾಪ ತಿರಸ್ಕಾರ ಮಾಡಿದ್ದಕ್ಕಾಗಿ ಮಾಜಿ ಲವರ್​ಗೆ ವ್ಯಕ್ತಿಯೊಬ್ಬ ಆಕೆಯ ಖಾಸಗಿ ಫೋಟೋ ಇಟ್ಟುಕೊಂಡು ಬ್ಲಾಕ್​ಮೇಲ್​ ಮಾಡಿರುವ ಘಟನೆ ನಡೆದಿದೆ.

ಸಾಂದರ್ಭಿಕ ಚಿತ್ರ

By

Published : Nov 2, 2019, 8:45 AM IST

ವಂಶಿ(ಮಹಾರಾಷ್ಟ್ರ):ಈಗಾಗಲೇ 18 ವರ್ಷದ ಮಗುವಿನೊಂದಿಗೆ ಜೀವನ ಕಳೆಯುತ್ತಿರುವ 39 ವರ್ಷದ ಯುವತಿಯೊಬ್ಬಳಿಗೆ ಆಕೆಯ ಮಾಜಿ ಲವರ್​​ ಬ್ಲಾಕ್​ ಮೇಲ್​ ಮಾಡಲು ಶುರು ಮಾಡಿದ್ದು, ಬರೋಬ್ಬರಿ 5 ಲಕ್ಷ ರೂ ಹಣ ನೀಡುವಂತೆ ಬೇಡಿಕೆಯಿಟ್ಟಿದ್ದಾನೆ.

ಮಹಾರಾಷ್ಟ್ರದ ವಂಶಿಯಲ್ಲಿ ಈ ಘಟನೆ ನಡೆದಿದ್ದು, ಕುಡಿತದ ಚಟಕ್ಕೆ ಗಂಡ ಒಳಗಾಗಿದ್ದ ಕಾರಣ ಕಳೆದ 17 ವರ್ಷಗಳ ಹಿಂದೆ ಆತನಿಂದ ದೂರವಾಗಿ ಮಹಿಳೆ ತನ್ನ ಮಗ ಹಾಗೂ ಸಹೋದರನೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಇದರ ಮಧ್ಯೆ ಇದೀಗ ಆಕೆಯ ಮಾಜಿ ಲವರ್​ 5 ಲಕ್ಷ ಹಣ ನೀಡುವಂತೆ ಬೇಡಿಕೆಯಿಟ್ಟಿದ್ದು, ಒಂದು ವೇಳೆ ನೀಡದಿದ್ದರೆ ಆಕೆಯ ಖಾಸಗಿ ಫೋಟೋ ವೈರಲ್​ ಮಾಡುವ ಬೆದರಿಕೆ ಹಾಕಿದ್ದಾನೆ.

ಘಟನೆ ನಡೆದಿದ್ದು ಹೇಗೆ!?
ಬೇರೆ ಮದುವೆಯಾಗಿ ಸಂಸಾರ ನಡೆಸುತ್ತಿದ್ದ ಮಹಿಳೆ ಕಳೆದ ಮೂರು ವರ್ಷಗಳ ಹಿಂದೆ ಸಂಬಂಧಿಕರ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹೋಗಿದ್ದಳು. ಅಲ್ಲಿಗೆ ಆಕೆಯ ಮಾಜಿ ಲವರ್ ಸಹ ಆಗಮಿಸಿದ್ದನು. ಈ ವೇಳೆ ಪರಸ್ಪರ ಮಾತುಕತೆ ನಡೆಸಿರುವ ಇವರು, ನಂಬರ್​ ಸಹ ಬದಲಾವಣೆ ಮಾಡಿಕೊಂಡಿದ್ದಾರೆ. ​​ಇದಾದ ಬಳಿಕ ಮೇಲಿಂದ ಮೇಲೆ ಭೇಟಿ ಮಾಡಿರುವ ಇವರ ನಡುವೆ ಶಾರೀರಿಕ ಸಂಬಂಧ ಸಹ ನಡೆದಿದೆ.

ಇನ್ನು ತನ್ನೊಂದಿಗೆ ಮದುವೆಯಾಗುವಂತೆ ಆತ ಮದುವೆ ಪ್ರಸ್ತಾಪ ಸಹ ಮಾಡಿದ್ದಾನೆ. ಆದರೆ ಇದಕ್ಕೆ ಆಕೆ ನಿರಾಕರಣೆ ಮಾಡಿದ್ದರಿಂದ ಆಕ್ರೋಶಗೊಂಡ ವ್ಯಕ್ತಿ ಅಶ್ಲೀಲ ವಿಡಿಯೋ ವೈರಲ್​ ಮಾಡುವ ಬೆದರಿಕೆ ಹಾಕಿದ್ದು, 5 ಲಕ್ಷ ರೂಪಾಯಿ ಹಣ ನೀಡುವಂತೆ ಬೇಡಿಕೆಯಿಟ್ಟಿದ್ದಾನೆ. ಇದೀಗ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.

ABOUT THE AUTHOR

...view details