ಇಂದೋರ್:ಮಹಿಳಾ ಹಾಸ್ಟೆಲ್ನೊಳಗೆ ನುಗ್ಗಿರುವ ವ್ಯಕ್ತಿಯೊಬ್ಬ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿರುವ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದ್ದು, ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಹಿಳಾ ಹಾಸ್ಟೆಲ್ನೊಳಗೆ ನುಗ್ಗಿ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ! - ಹಾಸ್ಟೇಲ್ ವಿದ್ಯಾರ್ಥಿನಿ ಮೇಲೆ ಹಲ್ಲೆ
ಏಕಾಏಕಿಯಾಗಿ ಮಹಿಳಾ ಹಾಸ್ಟೆಲ್ನೊಳಗೆ ನುಗ್ಗಿರುವ ವ್ಯಕ್ತಿಯೊಬ್ಬ ಅಲ್ಲಿನ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಆರೋಪಿ ಅಮರ್ಜಿತ್ ಸಿಂಗ್ ಈ ಕೃತ್ಯವೆಸಗಿದ್ದಾನೆ. ಕೆಲ ವಿದ್ಯಾರ್ಥಿನಿಯರು ಹಾಸ್ಟೆಲ್ ಹೊರಗಡೆ ನಿಂತು ಯುವಕರೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ, ಯುವಕರೊಂದಿಗೆ ಜಗಳ ತೆಗೆದಿದ್ದಾನೆ. ಇದಾದ ಬಳಿಕ ಹಾಸ್ಟೆಲ್ನೊಳಗೆ ನುಗ್ಗಿ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದ್ದಾನೆ. ಈಗಾಗಲೇ ಆರೋಪಿ ಬಂಧನ ಮಾಡಲಾಗಿದ್ದು, ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ವಿದ್ಯಾರ್ಥಿನಿ, ಹಾಸ್ಟೆಲ್ ಪಕ್ಕದಲ್ಲಿ ವಾಸವಾಗಿರುವ ವ್ಯಕ್ತಿ ಈ ಕೃತ್ಯವೆಸಗಿದ್ದು, ನಮ್ಮೊಂದಿಗೆ ಮೇಲಿಂದ ಮೇಲೆ ಅಶ್ಲೀಲವಾಗಿ ನಡೆದುಕೊಳ್ಳುತ್ತಿದ್ದು, ಈ ಹಿಂದೆ ಸಹ ಅನೇಕ ಸಲ ಈ ರೀತಿಯಾಗಿ ನಡೆದುಕೊಂಡಿದ್ದಾನೆ ಎಂದು ಹೇಳಿದ್ದಾರೆ.