ಶಹಜಹಾನ್ಪುರ (ಉತ್ತರ ಪ್ರದೇಶ):ರೈಲಿನ ಮುಂದೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯೊಬ್ಬ ತನ್ನ ದೇಹ ಇಬ್ಭಾಗವಾಗಿದ್ದರೂ 13 ಗಂಟೆಗಳ ಕಾಲ ಬದುಕಿ ನಂತರ ಮೃತಪಟ್ಟ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿ ಅರ್ಧ ದೇಹದೊಂದಿಗೆ ಬದುಕಿದ್ದ ವ್ಯಕ್ತಿ ಸಾವು ಮೃತಪಟ್ಟ ವ್ಯಕ್ತಿಯನ್ನು ಹತೋಡಾ ಗ್ರಾಮದ ಹರ್ಷವರ್ಧನ್ ಎಂದು ಗುರುತಿಸಲಾಗಿದ್ದು, ಸೋಮವಾರ ಬೆಳಗ್ಗೆ 10 ಗಂಟೆಗೆ ರೈಲಿನ ಮುಂದೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದ.
ಇದನ್ನೂ ಓದಿ:ಹುಬ್ಬಳ್ಳಿ: ಪ್ರತಿಭಾವಂತ ಯುವಕ ರೈಲಿಗೆ ತಲೆಕೊಟ್ಟು ಆತ್ಯಹತ್ಯೆ
ವ್ಯಕ್ತಿಯ ದೇಹದ ಮೇಲೆ ರೈಲು ಹರಿದು ಆತನ ದೇಹ ಇಬ್ಭಾಗವಾಗಿದ್ದು, ದೇಹದ ಮೇಲ್ಭಾಗ ಹಳ್ಳವೊಂದಕ್ಕೆ ಬಿದ್ದಿದೆ. ಆದರೂ ಕೂಡ ಆತ ಜೀವಂತವಾಗಿದ್ದು, ಇದನ್ನು ಗಮನಿಸಿದ ಸ್ಥಳೀಯರು ರೈಲ್ವೆ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಈ ವೇಳೆ ಆ ವ್ಯಕ್ತಿ ಸ್ಥಳೀಯರೊಂದಿಗೆ ಮಾತನಾಡಿದ್ದು, ತನ್ನ ಆತ್ಮಹತ್ಯೆಗೆ ಕಾರಣ ತಾನೇ ಎಂದು ಹೇಳಿಕೊಂಡಿದ್ದಾನೆ. ಸ್ವಲ್ಪ ಸಮಯದ ನಂತರ ಆತ ಮೃತಪಟ್ಟಿದ್ದು, ಮೃತದೇಹವನ್ನು ಹತ್ತಿರದ ಮೆಡಿಕಲ್ ಕಾಲೇಜ್ಗೆ ರವಾನಿಸಲಾಗಿದೆ.