ಕರ್ನಾಟಕ

karnataka

ETV Bharat / bharat

ತನ್ನ ಹೆಸರು ಬದಲಿಸಿ ಹುಡುಗಿಯ ಮತಾಂತರ ಯತ್ನ: ಯುಪಿಯಲ್ಲಿ ಯುವಕನ ಬಂಧನ - ಮತಾಂತರ ವಿರೋಧಿ ಕಾನೂನಿನಡಿ ವ್ಯಕ್ತಿ ಬಂಧನ

ಸಾಕಿಬ್ ತನ್ನ ನಿಜವಾದ ಧರ್ಮವನ್ನು ಮರೆಮಾಚಿ ಮತ್ತು ತನ್ನನ್ನು 'ಸೋನು' ಎಂದು ಹುಡುಗಿಗೆ ಪರಿಚಯಿಸಿದ್ದಾನೆ. ನಂತರ ಅವಳನ್ನು ಅಪಹರಿಸಿ ತನ್ನ ಧರ್ಮಕ್ಕೆ ಮತಾಂತರವಾಗಲು ಒತ್ತಾಯಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Man arrested under anti-conversion law in UP's Bijnor
ಬಾಲಕಿಯನ್ನು ಅಪಹರಿಸಿ ಧರ್ಮ ಬದಲಾಯಿಸಲು ಯತ್ನ: ಮತಾಂತರ ವಿರೋಧಿ ಕಾನೂನಿನಡಿ ವ್ಯಕ್ತಿ ಬಂಧನ

By

Published : Dec 17, 2020, 1:00 PM IST

ಬಿಜ್ನೋರ್(ಉತ್ತರ ಪ್ರದೇಶ):ಬಿಜ್ನೋರ್‌ನಲ್ಲಿ ಮತಾಂತರ ವಿರೋಧಿ ಕಾನೂನಿನಡಿ ಯುವಕನನ್ನು ಬಂಧಿಸಲಾಗಿದೆ.

ಆರೋಪಿ ಸಾಕಿಬ್ ಹುಡುಗಿಯನ್ನು ಅಪಹರಿಸಿ ತನ್ನ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸಿದ್ದಾನೆ ಎಂದು ಬಿಜ್ನೋರ್ (ಗ್ರಾಮೀಣ) ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಕುಮಾರ್ ಹೇಳಿದ್ದಾರೆ.

ಕಳೆದ ಕೆಲವು ದಿನಗಳಿಂದ ಧಂಪೂರಿನ ಬಾಲಕಿಯೊಬ್ಬಳು ಕಾಣೆಯಾಗಿದ್ದಳು. ಸದ್ಯ, ಬಾಲಕಿ ಮತ್ತು ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಹುಡುಗಿಯನ್ನು ಅಪಹರಿಸಿ ಬಲವಂತವಾಗಿ ಆಕೆಯ ಧರ್ಮ ಬದಲಿಸಲು ಯತ್ನಿಸಿರುವುದು ಗೊತ್ತಾಗಿದೆ ಎಂದು ಅವರು ತಿಳಿಸಿದ್ದಾರೆ.

"ಸಾಕಿಬ್ ತನ್ನ ನಿಜವಾದ ಧರ್ಮವನ್ನು ಮರೆಮಾಚಿ ಮತ್ತು ತನ್ನನ್ನು ತಾನು 'ಸೋನು' ಎಂದು ಹುಡುಗಿಗೆ ಪರಿಚಯಿಸಿದ್ದಾನೆ. ನಂತರ ಅವಳನ್ನು ಅಪಹರಿಸಿ ತನ್ನ ಧರ್ಮಕ್ಕೆ ಮತಾಂತರವಾಗಲು ಒತ್ತಾಯಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಕಾನೂನುಬಾಹಿರ ಧಾರ್ಮಿಕ ಮತಾಂತರ ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯನ್ವಯ ಕೇಸು ದಾಖಲಿಸಲಾಗಿದೆ" ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ABOUT THE AUTHOR

...view details