ದೇವಾಸ್(ಮಧ್ಯಪ್ರದೇಶ):ವ್ಯಕ್ತಿಯೋರ್ವ ಮನೆಯ ಮೇಲೆ ಪಾಕಿಸ್ತಾನದ ರಾಷ್ಟ್ರೀಯ ಧ್ವಜ ಹಾರಿಸಿರುವ ಆರೋಪ ಎದುರಿಸುತ್ತಿದ್ದು, ಇದೀಗ ಆತನ ಬಂಧನ ಮಾಡುವಲ್ಲಿ ಮಧ್ಯಪ್ರದೇಶ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಧ್ಯಪ್ರದೇಶದ ದೇವಾಸ್ ಪ್ರದೇಶದ ವ್ಯಕ್ತಿ ತನ್ನ ಮನೆಯ ಮೇಲೆ ಪಾಕ್ ಧ್ವಜ ಹಾರಿಸಿದ್ದಾನೆ ಎಂಬ ಆರೋಪ ಎದುರಿಸುತ್ತಿದ್ದಾನೆ. ಈಗಾಗಲೇ ಆತನ ಬಂಧನ ಮಾಡಲಾಗಿದೆ. ಪಾಕ್ ಧ್ವಜ ಆತನಿಗೆ ಎಲ್ಲಿಂದ ಸಿಕ್ತು ಎಂಬ ಮಾಹಿತಿ ಇಲ್ಲಿಯವರೆಗೆ ತಿಳಿದು ಬಂದಿಲ್ಲ. ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಜತೆಗೆ ಮನೆಯಿಂದ ಪಾಕ್ ಧ್ವಜ ವಶಪಡಿಸಿಕೊಂಡಿದ್ದಾರೆ.