ಕುರುಕ್ಷೇತ್ರ: ಸ್ನೇಹವೆಂದರೆ ಹೃದಯದ ನಡುವಿನ ಅಮೂಲ್ಯವಾದ ಸಂಬಂಧ. ಸ್ನೇಹದ ಭಾವನೆ ಮನುಷ್ಯರಲ್ಲಿ ಮಾತ್ರವಲ್ಲ, ಮನುಷ್ಯ ಹಾಗೂ ಪ್ರಾಣಿಯಲ್ಲಿ ಕೂಡ ಅಡಗಿದೆ. ಅಪಾಯಕಾರಿ ಪ್ರಾಣಿಯ ಜೊತೆಗೂ ವ್ಯಕ್ತಿಯೊಬ್ಬ ಸ್ನೇಹ ಬೆಳೆಸಿರುವುದಕ್ಕೆ ಹರಿಯಾಣದ ಕುರುಕ್ಷೇತ್ರ ಸಾಕ್ಷಿಯಾಗಿದೆ.
ಮನುಷ್ಯ-ಮೊಸಳೆಯ ಸ್ನೇಹಕ್ಕೆ ಸಾಕ್ಷಿಯಾದ ಕುರುಕ್ಷೇತ್ರ...!
ಹರಿಯಾಣದ ಕುರುಕ್ಷೇತ್ರದ ಭೋರ್ ಸೈದಾ ಎಂಬ ಹಳ್ಳಿಯ ತಾರಾ ಸಿಂಹ್ ಎಂಬ ವ್ಯಕ್ತಿ ಹಾಗೂ ಬಸಂತಿ ಎಂಬ ಮೊಸಳೆಯ ಸ್ನೇಹಕ್ಕೆ ಎಲ್ಲರೂ ಬೆರಗಾಗಿದ್ದಾರೆ. ಇವರ ಹಕ್ಕೆ ಸರಿಸಾಟಿಯಿಲ್ಲವಾಗಿದೆ.
ಹೌದು.., ಕುರುಕ್ಷೇತ್ರದ ಭೋರ್ ಸೈದಾ ಎಂಬ ಹಳ್ಳಿಯ ತಾರಾ ಸಿಂಹ್ ಎಂಬ ವ್ಯಕ್ತಿ ಹಾಗೂ ಬಸಂತಿ ಎಂಬ ಮೊಸಳೆಯ ಸ್ನೇಹಕ್ಕೆ ಎಲ್ಲರೂ ಬೆರಗಾಗಿದ್ದಾರೆ. ಭೋರ್ ಸೈದಾ ಭೋರ್ ಹಳ್ಳಿಯಲ್ಲಿ ಮೊಸಳೆ ಸಂತಾನೋತ್ಪತ್ತಿ ಕೇಂದ್ರವಿದ್ದು, ಮೊಸಳೆಗಳನ್ನು ಸಂರಕ್ಷಿಸಿ ಇಡಲಾಗಿದೆ. ಬಹಳ ಸಮಯದಿಂದ ಅದರ ಉಸ್ತುವಾರಿ ವಹಿಸಿರುವ ತಾರಾ ಸಿಂಹ್ಗೆ ಮೊಸಳೆಯೊಂದಿಗಿನ ನಂಟನ್ನು ವಿವರಿಸಲು ಸಾಧ್ಯವಿಲ್ಲ. ಈತ ಸರೋವರದ ದಡದಲ್ಲಿ ನಿಂತು ಕರೆದರೆ ಸಾಕು ಮೊಸಳೆಗಳೆಲ್ಲವೂ ಸಿಂಹ್ ಸುತ್ತಲೂ ಬಂದು ಸೇರುತ್ತವೆ. ಅದರಲ್ಲೂ ಬಸಂತಿ ಎಂಬ ಮೊಸಳೆ, ಹೇಳಿದಂತೆ ಕೇಳುತ್ತಾ ತಾರಾರನ್ನ ತುಂಬಾ ಹಚ್ಚಿಕೊಂಡಿದ್ದು, ಇವರ ಸ್ನೇಹಕ್ಕೆ ಸರಿಸಾಟಿಯಿಲ್ಲವಾಗಿದೆ.
ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮುಂಚೆ ಇಲ್ಲಿ ವಾಸಿಸುತ್ತಿದ್ದ ಒಬ್ಬ ಸನ್ಯಾಸಿ, ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಬಂದ ಎರಡು ಮೊಸಳೆ ಮರಿಗಳನ್ನು ಸಾಕಿ ಬೆಳೆಸಲಾರಂಭಿಸಿದ್ದರಂತೆ. ಸಮಯ ಬದಲಾದಂತೆ, ಮೊಸಳೆಗಳ ಸಂಖ್ಯೆ ಹೆಚ್ಚಾಯಿತು. ರೈತರು, ಗ್ರಾಮಸ್ಥರು ಒಟ್ಟಾಗಿ ಈ ಸ್ಥಳವನ್ನು ಸರ್ಕಾರಕ್ಕೆ ನೀಡಿದರು. ಬಳಿಕ ಇಲ್ಲಿ ಸರ್ಕಾರ ಮೊಸಳೆ ಸಂತಾನೋತ್ಪತ್ತಿ ಕೇಂದ್ರವನ್ನು ತೆರೆಯಿತು. ಆ ಬಳಿಕ ತಾರಾ ಸಿಂಹ್ ಇಲ್ಲಿ ನಿರ್ವಹಣಾ ಕಾರ್ಯ ಮುಂದುವರೆಸಿಕೊಂಡು ಬಂದಿದ್ದಾರೆ.