ಪಶ್ಚಿಮ ಬಂಗಾಳ: ಇಲ್ಲಿನ ಉತ್ತರ 24 ಪರಗಣ ಜಿಲ್ಲೆಯ ಗೈಘಾಟಾದ ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬನ ಶವವೊಂದು ಪತ್ತೆಯಾಗಿದೆ. ಪರಿಚಯಸ್ಥರೇ ಕೊಲೆ ಮಾಡಿ ಮನೆಯಲ್ಲಿ ಹೂತು ಹಾಕಿದ್ದಾರೆ ಎಂದು ಪೊಲೀಸರು ಶಂಕ್ಯೆ ವ್ಯಕ್ತಪಡಿಸಿದ್ದಾರೆ.
ಕೊಳೆತ ಸ್ಥಿತಿಯಲ್ಲಿ ಗಂಡನ ಶವ ಪತ್ತೆ; ಲವರ್ ಜೊತೆ ಸೇರಿ ಗಂಡನನ್ನು ಮುಗಿಸಿದ ಪತ್ನಿ? - latest crime news
ಪತ್ನಿಯೊಬ್ಬಳು ಅಕ್ರಮ ಸಂಬಂಧದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಗಂಡನನ್ನೇ ಕೊಲೆ ಮಾಡಿದ್ದಾಳೆ. ಕೊಲೆ ಬಳಿಕ ಗಂಡನ ಮೃತದೇಹವನ್ನು ಯಾರಿಗೂ ಗೊತ್ತಾಗದಂತೆ ಲವ್ವರ್ ಜೊತೆ ಸೇರಿ ಮನೆಯಲ್ಲೇ ಹೂತು ಹಾಕಿದ್ದಾಳೆ ಎಂದು ಅನುಮಾನ ವ್ಯಕ್ತಪಡಿಸಿ ಪೊಲೀಸರು ಪತ್ನಿ ಹಾಗೂ ಲವ್ವರ್ನನ್ನು ವಶಕ್ಕೆ ಪಡೆದಿದ್ದಾರೆ.
ರಾಮಕೃಷ್ಣ ಸರ್ಕಾರ್ (27) ಎಂಬಾತ ಶವ ಇದಾಗಿದೆ. ವ್ಯಕ್ತಿಯನ್ನು ಮೊದಲು ಕೊಲೆ ಮಾಡಿದ ಆಗಂತುಕರು ಬಳಿಕ ಯಾರಿಗೂ ಗೊತ್ತಾಗದಂತೆ ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಮೃತ ದೇಹವನ್ನು ಮನೆಯಲ್ಲಿಯೇ ಹೂತು ಹಾಕಿದ್ದರು. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಗೆ ಯಾರೋ ಮಾಹಿತಿ ನೀಡಿದ್ದರು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮನೆಯ ಸದಸ್ಯರ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ.
ಮೃತ ವ್ಯಕ್ತಿಯ ಹೆಂಡತಿ ಸ್ವಪ್ನಾ ಸರ್ಕಾರ್ ದಾಸ್ ಎಂಬ ಮತ್ತೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪೊಲೀಸರು, ಇವರೇ ಕೊಲೆ ಮಾಡಿ ಹೂತು ಹಾಕಿರಬಹುದು ಎಂದು ಶಂಕ್ಯೆ ವ್ಯಕ್ತಪಡಿಸಿದ್ದಾರೆ. ಕೊಳೆತ ಶವವನ್ನು ಹೊರತೆಗೆದ ಪೊಲೀಸರು, ತನಿಖೆ ನಡೆಸಿದ್ದಾರೆ. ಅಕ್ರಮ ಸಂಬಂಧದ ವಿಷಯ ಪತಿಗೆ ಗೊತ್ತಾಗಿದ್ದರಿಂದ ಈತನನ್ನು ಕೊಲೆ ಮಾಡಿರಬಹುದು ಎನ್ನಲಾಗುತ್ತಿದೆ. ಆರೋಪಿಗಳಿಬ್ಬರು ಇದೀಗ ಪೊಲೀಸರ ವಶದಲ್ಲಿದ್ದಾರೆ.