ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಎಂಬಿಬಿಎಸ್ ಕೋರ್ಸ್‌ನ ಸೀಟುಗಳ ಸಂಖ್ಯೆಯನ್ನು 4,000 ಹೆಚ್ಚಿಸಲಾಗಿದೆ. ಈ ಕುರಿತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
ವೈದ್ಯಕೀಯ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಿದ ಮಮತಾ ಬ್ಯಾನರ್ಜಿ..! - ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳದ ವೈದ್ಯಕೀಯ ಸೀಟುಗಳ ಸಂಖ್ಯೆಯನ್ನು, ಸಿಎಂ ಮಮತಾ ಬ್ಯಾನರ್ಜಿಯವರು 4,000 ಕ್ಕೆ ಹೆಚ್ಚಿಸಿದ್ದಾರೆ.
ಮಮತಾ ಬ್ಯಾನರ್ಜಿ
ಪುರುಲಿಯಾ ಸರ್ಕಾರಿ ಎಂಸಿಎಚ್ನಲ್ಲಿ 100 ಹಾಗೂ ಗೌರಿ ದೇವಿ ವೈದ್ಯಕೀಯ ಕಾಲೇಜಿನಲ್ಲಿ 150 ಎಂಬಿಬಿಎಸ್ ಸೀಟುಗಳನ್ನು ಸೇರಿಸಲಾಗಿದೆ. ಈ ಎರಡು ವೈದ್ಯಕೀಯ ಕಾಲೇಜುಗಳಲ್ಲಿ 250 ಸೀಟುಗಳನ್ನು ಸೇರಿಸಿ, ಒಟ್ಟು ಸೀಟುಗಳ ಸಂಖ್ಯೆಯನ್ನು 4,000 ಕ್ಕೆ ಏರಿಕೆ ಮಾಡಲಾಗಿದೆ.
ಇನ್ನು 2011 ರಲ್ಲಿ ತೃಣಮೂಲ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ, ಪಶ್ಚಿಮ ಬಂಗಾಳದಲ್ಲಿ 1,355 ಎಂಬಿಬಿಎಸ್ ಸೀಟುಗಳು ಇದ್ದವು. ಈ ಕುರಿತಾಗಿ ಕಳೆದ ವರ್ಷ ಆರೋಗ್ಯ ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ತಿಳಿಸಿದ್ದರು.