ನವದೆಹಲಿ:ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ)ವಿರೋಧಿ ಉಪಗ್ರಹಗಳ ದಮನ ಮಾಡುವ ಎ- ಸ್ಯಾಟ್ ಯಶಸ್ವಿ ಪರೀಕ್ಷೆ ನಡೆಸಿದ ವಿಷಯದ ಬಗ್ಗೆ ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದ ಭಾಷಣಕ್ಕೆ ಇದೀಗ ಭಾರಿ ವಿರೋಧ ವ್ಯಕ್ತವಾಗುತ್ತಿದೆ.
ಡಿಆರ್ಡಿಒ ಎ- ಸ್ಯಾಟ್ ಮೂಲಕ ನಿಗದಿತ ಉಪಗ್ರಹವನ್ನು ಹೊಡೆದುರುಳಿಸುವ ಮೂಲಕ ಈ ವ್ಯವಸ್ಥೆ ಅಳವಡಿಸಿಕೊಂಡ ವಿಶ್ವದ ನಾಲ್ಕನೇ ರಾಷ್ಟ್ರ ಎಂಬ ಹೆಮ್ಮೆಗೆ ಕೂಡಾ ಪಾತ್ರವಾಗಿತ್ತು.ಈ ಹಿನ್ನೆಲೆಯಲ್ಲಿ ಪ್ರಧಾನಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿ ವಿಜ್ಞಾನಿಗಳನ್ನ ಶ್ಲಾಘಿಸಿದ್ದರು.
ಹೆಚ್ಚಿನ ಓದಿಗಾಗಿ:
ಎರಡು ಸರ್ಕಾರದ ನಡುವೆ ಸಾಗಿ ಬಂದ ಮಿಷನ್ ಶಕ್ತಿ ಏನು..? ಮೋದಿ ಭಾಷಣದ ಉದ್ದೇಶದ ಹಿಂದಿದೆ ಈ ಗುರಿ..!
ಪ್ರಧಾನಿಗಳ ಈ ಭಾಷಣ ಈಗ ವಿವಾದಕ್ಕೀಡಾಗಿದೆ.ಪ್ರಧಾನಿ ಭಾಷಣವನ್ನ ಪೊಲಿಟಿಕಲ್ ಗಿಮಿಕ್ ಅಂದಿರುವ ಮಮತಾ ಬ್ಯಾನರ್ಜಿ, ವಿಜ್ಞಾನಿಗಳು ಮಾಡಿರುವ ಸಾಧನೆಯನ್ನು ಪ್ರಕಟಿಸುವ ಅಗತ್ಯವೇನಿತ್ತು. ಅದನ್ನ ಅವರೇ ಸುದ್ಧಿಗೋಷ್ಠಿ ನಡೆಸಿ ಹೇಳಿಕೊಳ್ಳುತ್ತಿದ್ದರು ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.
ವಿಜ್ಞಾನಿಗಳ ಕ್ರೆಡಿಟ್ ಅನ್ನು ಘೋಷಣೆ ಮಾಡುವ ಮೂಲಕ ಪ್ರಧಾನಿ ಮೋದಿ ತಾವು ತೆಗೆದುಕೊಂಡಿದ್ದಾರೆ ಎಂದು ಸಿಡಿಮಿಡಿಗೊಂಡಿರುವ ದೀದಿ, ಒಂದೇ ಒಂದು ಉಪಗ್ರಹ ಹೊಡೆದುರಳಿಸಲಾಗಿದೆ. ಈ ಬಗ್ಗೆ ಘೋಷಣೆ ಮಾಡುವ ಅಗತ್ಯವಿರಲಿಲ್ಲ. ಮೋದಿ ಸುಳ್ಳುಗಳ ಸರಮಾಲೆಯನ್ನ ಹೆಣೆಯುತ್ತಲೇ ಬಂದಿದ್ದಾರೆ. ಈ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಮಮತಾ ಹೇಳಿದ್ದಾರೆ.
ಇನ್ನೊಂದೆಡೆ, ಸಿಪಿಐ(ಎಂ) ಚುನಾವಣಾ ಆಯೋಗಕ್ಕೆ ಪತ್ರ ಬರೆಯುವ ಮೂಲಕ ದೂರು ನೀಡಿದೆ.ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. ಮೇಲಾಗಿ ಅವರು ಅಭ್ಯರ್ಥಿಯಾಗಿರುವಾಗ ಮಿಷನ್ ಶಕ್ತಿ ಘೋಷಣೆ ಮಾಡುವ ಅವಶ್ಯಕತೆ ಇತ್ತೆ ಎಂದು ಪ್ರಶ್ನಿಸಿದೆ.ಇದು ನಿಚ್ಚಳವಾಗಿ ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆ ಎಂದೂ ಚುನಾವಣಾ ಆಯೋಗದ ಗಮನಕ್ಕೆ ತಂದಿದೆ.