ಕರ್ನಾಟಕ

karnataka

ETV Bharat / bharat

ಲೋಕ ಚುನಾವಣೆಗೆ 60 ಸಾವಿರ ಕೋಟಿ ರೂ. ವೆಚ್ಚ... ಸುಧಾರಣಾ ಕ್ರಮಕ್ಕೆ ಮೋದಿಗೆ ದೀದಿ ಪತ್ರ - undefined

ಚುನಾವಣಾ ವೆಚ್ಚ ಹಾಗೂ ಭ್ರಷ್ಟಾಚಾರ, ಅಪರಾಧಗಳ ತಡೆಗಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.

ಮೋದಿಗೆ ದೀದಿ

By

Published : Jul 26, 2019, 6:49 PM IST

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿಯವರಿಗೆ "ಭ್ರಷ್ಟಾಚಾರ ಮತ್ತು ಅಪರಾಧವನ್ನು ತಡೆಗಟ್ಟುವ ಮತ್ತು ಚುನಾವಣಾ ಸುಧಾರಣೆಗಳ" ಕುರಿತು ಪತ್ರ ಬರೆದಿದ್ದಾರೆ.

ಭಾರತದಲ್ಲಿ ನಡೆಯುವ ಚುನಾವಣೆಗಳು ಭಾರಿ ವೆಚ್ಚಭರಿತವಾಗಿದ್ದು, 2019ರ ಲೋಕ ಸಭೆ ಚುಣಾವಣೆಯ ವೆಚ್ಚವನ್ನು ಇತರೇ ದೇಶಗಳಿಗೆ ಹೋಲಿಸಿಕೊಂಡರೆ ದಾಖಲೆ ಮಟ್ಟದ ವೆಚ್ಚವನ್ನು ಮಾಡಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

2019ರ ಲೋಕಸಭಾ ಚುನಾವಣೆಯಲ್ಲಿ 60 ಸಾವಿರ ಕೋಟಿ ರೂ. ವೆಚ್ಚವಾಗಿದೆ. 2014ರ ಚುನಾವಣೆಗಿಂತ ದುಪ್ಪಟ್ಟು ವೆಚ್ಚ ಮಾಡಲಾಗಿದೆ. ಹೀಗೇ ಮುಂದುವರಿದರೆ 2024ರ ಲೋಕಸಭಾ ಚುನಾವಣೆ ವೆಚ್ಚವು ಒಂದು ಲಕ್ಷ ಕೋಟಿ ರೂ. ದಾಟುವುದರಲ್ಲಿ ಅನುಮಾನವಿಲ್ಲ ಎಂದು ಬ್ಯಾನರ್ಜಿ ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಮುಂಬರುವ ಚುಣಾವಣೆಗಳನ್ನು ಎದುರಿಸುವಾಗ ವೆಚ್ಚದಲ್ಲಿ ಪರಿಷ್ಕರಣೆ ಮಾಡುವ ಕುರಿತು ಪತ್ರದಲ್ಲಿ ತಿಳಿಸಲಾಗಿದೆ. ಈ ಕುರಿತು ಸರ್ವ ಪಕ್ಷಗಳ ಸಭೆ ನಡೆಸಿ ಚುನಾವಣೆಯ ಸಂದರ್ಭದಲ್ಲಿ ಸುಖಾ ಸುಮ್ಮನೆ ವೆಚ್ಚಮಾಡುತ್ತಿರುವ ಬಗ್ಗೆ ತಿಳಿಸಬೇಕೆಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಇದಕ್ಕೆ ಆಧಾರವೆಂಬಂತೆ 2014 ಮತ್ತು 2019ರ ಲೋಕಸಭಾ ಚುನಾವಣೆಯ ವೆಚ್ಚವನ್ನು ತೋರಿಸಲಾಗಿದೆ.

For All Latest Updates

TAGGED:

ABOUT THE AUTHOR

...view details