ಪಶ್ಚಿಮ ಬಂಗಾಳ: ಕಳೆದ 10 ವರ್ಷಗಳಿಂದ ತೃಣಮೂಲ ಕಾಂಗ್ರೆಸ್ ಪಕ್ಷವು ಮಟುವಾ ಸಮುದಾಯದ ಮತಗಳಲ್ಲಿ ತನ್ನ ಹಿಡಿತ ಸಾಧಿಸಿತ್ತು. ಆದರೆ, 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಬೊಂಗಾಂವ್ ಮತ್ತು ರಣಘಾಟ್ ಕ್ಷೇತ್ರದಲ್ಲಿ ಟಿಎಂಸಿಯನ್ನು ಸೋಲಿಸಿ ತನ್ನ ಅಧಿಕಾರ ಸಾಧಿಸಿತ್ತು.
ಇದೀಗ ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಆಳ್ವಿಕೆ ಅಂತ್ಯಗೊಳಿಸಬೇಕು ಎಂದು ಪಣತೊಟ್ಟಿರುವ ಸಿಎಂ ಮಮತಾ ಬ್ಯಾನರ್ಜಿ, ರಣಘಾಟ್‌ನಲ್ಲಿ ರ‍್ಯಾಲಿ ನಡೆಸಲು ಮುಂದಾಗಿದ್ದಾರೆ. ಈಗಾಗಲೇ ಮಟುವಾ ಸಮುದಾಯದ ಜನರನ್ನು ಭೇಟಿ ನೀಡಿ ಪ್ರಚಾರಕಾರ್ಯ ನಡೆಸಿದ್ದಾರೆ.
ಇದನ್ನು ಓದಿ: ಕೃಷಿ ಕಾನೂನುಗಳನ್ನು ಸ್ವಲ್ಪ ಸಮಯದವರೆಗೆ ತಡೆಹಿಡಿಯಬಹುದೇ?: ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ
ಈ ಮಧ್ಯೆ ಬಿಜೆಪಿ ಮುಖಂಡ ಅಮಿತ್ ಶಾ, ಜನವರಿಯಲ್ಲೇ ಠಾಕೂರ್ನಗರಕ್ಕೆ ಭೇಟಿ ನೀಡಲಿದ್ದಾರೆ. ಅದಕ್ಕೂ ಮೊದಲು, ಮಮತಾ ಬ್ಯಾನರ್ಜಿ ಮಟುವಾದ ಜನರನ್ನು ಭೇಟಿ ಮಾಡಿ ಜನರನ್ನು ಸಂಪರ್ಕಿಸಲು ಉತ್ತಮ ಪ್ರಯತ್ನ ಮಾಡುತ್ತಿದ್ದಾರೆ. ಮಮತಾ ಬ್ಯಾನರ್ಜಿ ಹೆಲಿಕಾಪ್ಟರ್ ಮೂಲಕ ಇಂದು ಮಧ್ಯಾಹ್ನ 12.30ರ ವೇಳೆಗೆ ರಣಘಾಟ್ ಬಳಿಯ ಹಬೀಪುರಕ್ಕೆ ತಲುಪಲಿದ್ದಾರೆ. ಟಿಎಂಸಿ ಮುಖ್ಯಸ್ಥರ
ರ‍್ಯಾಲಿಯ ಸಿದ್ಧತೆಗಳು ಬಹುತೇಕ ಮುಗಿದಿದ್ದು, ಪೊಲೀಸರು ಮತ್ತು ಆಡಳಿತ ಅಧಿಕಾರಿಗಳು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿದ್ದಾರೆ.