ಕೋಲ್ಕತ್ತಾ:ಪಶ್ಚಿಮ ಬಂಗಾಳದಲ್ಲಿ ಚುನಾವಣೆಗೂ ಮುನ್ನವೇ ರಾಜಕೀಯ ಸಮರದ ಕಾವು ಏರುತ್ತಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಂಜುರಾ ಜಿಲ್ಲೆಯ ಬುಡಕಟ್ಟು ಸಮುದಾಯದ ಪಕ್ಷದ ಕಾರ್ಯಕರ್ತರ ಮನೆಯಲ್ಲಿ ಬಿಜೆಪಿ ನಾಯಕರ ಜತೆ ಕುಳಿತು ಊಟ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಡೆ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಬುಡಕಟ್ಟು ಕುಟುಂಬಸ್ಥರು ಸಿದ್ಧಪಡಿಸಿದ ಆಹಾರವನ್ನು ಅಮಿತ್ ಶಾ ತಿನ್ನಲಿಲ್ಲ. ಹೊರಗಿನಿಂದ ಪಾರ್ಸಲ್ ತಂದಿದ್ದ ಊಟ ಮಾಡಿದ್ದಾರೆ. ಅಮಿತ್ ಶಾ ಅವರ ಬಂಕುರಾ ಕಾರ್ಯಕ್ರಮ ಒಂದು ಪಬ್ಲಿಕ್ ಶೋ. ಬಿಜೆಪಿ ನಾಯಕರ ಬುಡಕಟ್ಟು ಕುಟುಂಬಸ್ಥರೊಂದಿಗಿನ ಊಟದ ಫೋಟೋ ಪ್ರದಶರ್ನಕ್ಕೆ ಮಾತ್ರ ಸೀಮಿತ ಎಂದು ಅಣಕವಾಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪಶ್ಚಿಮ ಬಂಗಾಳ ಪ್ರವಾಸದ ವೇಳೆಯಲ್ಲಿ ಬುಡಕಟ್ಟು ಕುಟುಂಬದ ಮನೆಯೊಂದರಲ್ಲಿ ಪಕ್ಷದ ಮುಖಂಡರು ಸೇರಿ ಊಟ ಮಾಡಿದ್ದರು.