ಕೋಲ್ಕತ್ತಾ:ಪ್ರಧಾನಿ ಮೋದಿ ವಿರುದ್ಧ ಕಂಡ ಕಂಡಲ್ಲಿ ಕೆಂಡ ಕಾರುತ್ತಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನಾಳೆ ನಡೆಯಲಿರುವ ಸರ್ವಪಕ್ಷಗಳ ಸಭೆಗೆ ಗೈರಾಗಲಿದ್ದಾರೆ ಎನ್ನುವ ಸುದ್ದಿ ದೊರೆತಿದೆ.
'ಒಂದು ದೇಶ, ಒಂದು ಚುನಾವಣೆ' ಎನ್ನುವ ಮಹತ್ವದ ವಿಷಯದ ಕುರಿತು ಮಾತುಕತೆ ನಡೆಸಲು ಪ್ರಧಾನಿ ಮೋದಿ ಬುಧವಾರ ಸರ್ವಪಕ್ಷಗಳ ಸಭೆ ಕರೆದಿದ್ದಾರೆ.
ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್ ಜೋಶಿ ಸರ್ವಪಕ್ಷಗಳ ಸಭೆಗ ಆಹ್ವಾನ ನೀಡಿದ್ದು, ಪತ್ರಕ್ಕೆ ಉತ್ತರಿಸಿರುವ ದೀದಿ, ಇಂತಹ ವಿಚಾರದ ಚರ್ಚೆಗೆ ಸಾಕಷ್ಟು ಸಮಯಾವಕಾಶದ ಅಗತ್ಯತೆ ಇದೆ ಎಂದಿದ್ದಾರೆ. ಎಲ್ಲ ಪಕ್ಷಗಳಿಗೂ ಖಾಲಿ ಹಾಳೆಯನ್ನು ನೀಡಿ ಅಭಿಪ್ರಾಯ ಸಂಗ್ರಹಿಸುವ ಕಾರ್ಯ ಮಾಡಬೇಕೇ ಹೊರತು, ಅಲ್ಪ ಸಮಯದಲ್ಲಿ ಈ ರೀತಿಯ ಮಾತುಕತೆ ನಡೆಸಿದರೆ ಪ್ರಯೋಜನವಿಲ್ಲ ಎಂದು ಮಮತಾ ಹೇಳಿದ್ದಾರೆ.