ಕೋಲ್ಕತ್ತಾ: 'ಜೈ ಶ್ರೀ ರಾಮ್' ಘೋಷಣೆಯ ಮೂಲಕ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಬಿಜೆಪಿ ಟಾಂಗ್ ನೀಡುತ್ತಲೇ ಇದೆ. ಇದೀಗ ಮಮತಾ ಸಂಬಂಧಿ, 'ಜೈ ಮಾಕಾಳಿ' ಘೋಷಣೆಯಿಂದ 'ಜೈ ಶ್ರೀರಾಮ್' ಘೋಷಣೆಯ ಟಿಆರ್ಪಿ ಕಡಿಮೆಯಾಗುತ್ತೆ ಎಂದು ಹೇಳಿಕೆ ನೀಡಿದ್ದಾರೆ.
ದೀದಿ ಸಂಬಂಧಿ, ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಕಾರ್ಯಕ್ರಮವೊಂದರಲ್ಲಿ, ಜೈ ಶ್ರೀರಾಮ್ ಘೋಷಣೆಯಂತೆಯೇ ಜೈ ಮಾಕಾಳಿ ಘೋಷಣೆ ಹೆಚ್ಚಿಸಲು ದಿಲೀಪ್ ಘೋಷ್ ಹೇಳಿದ್ದಾರೆಂದು ಜನರು ನನಗೆ ಹೇಳಿದರು. ನಾನವರಿಗೆ ಹೇಳಿದೆ, ಮಮತಾ ಬ್ಯಾನರ್ಜಿ ಅಲ್ಲಿಯೇ ಇರುವುದರಿಂದ, ರಾಮನ ಟಿಆರ್ಪಿ ಕಡಿಮೆಯಾಗಿ, ಮಾ ಕಾಳಿಯ ಟಿಆರ್ಪಿ ಹೆಚ್ಚುತ್ತದೆ ಎಂದಿದ್ದಾರೆ.