ದಿನ್ಹತಾ (ಪಶ್ಚಿಮ ಬಂಗಾಳ):ತಮ್ಮನ್ನು ಸ್ಪೀಡ್ ಬ್ರೇಕರ್ ಎಂದು ಕುಟುಕಿದ್ದ ಪ್ರಧಾನಿ ನರೇಂದ್ರ ಮೋದಿಗೆ ಟಾಂಗ್ ನೀಡಿರುವ ಪಶ್ಚಿಮಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಮೋದಿ ಎಕ್ಸ್ಪೈರಿ ಬಾಬು (ಅವಧಿ ಮುಗಿದ ಬಾಬು) ಎಂದು ಕರೆದಿದ್ದಾರೆ.
ಪ್ರಧಾನಿ ಮೋದಿ 'ಎಕ್ಸ್ಪೈರಿ ಬಾಬು' ಎಂದ ದೀದಿ : ಬಹಿರಂಗ ಚರ್ಚೆಗೆ ಕರೆದರು ಮಮತಾ - ಪ್ರಧಾನಿ ಮೋದಿ
ಪ್ರಧಾನಿ ಮೋದಿಯರನ್ನು ಎಕ್ಸ್ಪೈರಿ ಬಾಬು ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಗೇಲಿ ಮಾಡಿದ್ದಾರೆ.

ಪ್ರಧಾನಿ ಮೋದಿರನ್ನು ಎಕ್ಸ್ಪೈರಿ ಬಾಬು ಎಂದ ಮಮತಾ ಬ್ಯಾನರ್ಜಿ
ಪ್ರಧಾನಿ ಮೋದಿಯನ್ನ ಗೇಲಿ ಮಾಡಿದ ಸಿಎಂ ಮಮತಾ ಬ್ಯಾನರ್ಜಿ
ದಿನ್ಹತಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರನ್ನು ಎಕ್ಸ್ಪೈರಿ ಬಾಬು, ಎಕ್ಸ್ಪೈರಿ ಪಿಎಂ ಎಂದು ಕಿಚಾಯಿಸಿದ್ದಾರೆ. ಅಲ್ಲದೇ, ಟಿವಿ ಅಥವಾ ಸಾರ್ವಜನಿಕ ಸಭೆಯಲ್ಲಿ ತನ್ನೊಂದಿಗೆ ನೇರವಾಗಿ ಚರ್ಚೆಗೆ ಬನ್ನಿ ಎಂದು ಬಹಿರಂಗ ಸವಾಲು ಸಹ ಹಾಕಿದ್ದಾರೆ.
ರಾಜ್ಯ ಸರ್ಕಾರ ಜನರ ಕಲ್ಯಾಣಕ್ಕಾಗಿ ಸಾಕಷ್ಟು ಶ್ರಮ ವಹಿಸಿದೆ. ರೈತರ ಆದಾಯ ಮೂರು ಪಟ್ಟು ಹೆಚ್ಚಳವಾಗಿದೆ ಎಂದರು. ನಾನು ಮೋದಿ ಅಲ್ಲ. ಹಾಗಾಗಿ ಸುಳ್ಳು ಹೇಳಲ್ಲ ಎಂದು ಹರಿಹಾಯ್ದರು. ಮೋದಿ ಅಧಿಕಾರಾವಧಿಯಲ್ಲಿ 12 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದೂ ಟೀಕಿಸಿದರು.