ಕರ್ನಾಟಕ

karnataka

ETV Bharat / bharat

5 ವರ್ಷದೊಳಗಿನ ಮಕ್ಕಳ ಸಾವಿಗೆ ಅಪೌಷ್ಠಿಕತೆ ನೇರ ಕಾರಣವಲ್ಲ: ಕೇಂದ್ರ ಸಚಿವೆ ಸ್ಮೃತಿ - Malnutrition

0-6 ವರ್ಷ ವಯಸ್ಸಿನ ಮಕ್ಕಳು, ಹದಿಹರೆಯದ ಹುಡುಗಿಯರು, ಗರ್ಭಿಣಿಯರು ಹಾಗೂ ಹಾಲುಣಿಸುವ ತಾಯಂದಿರಿಗೆ ಸಮಯಕ್ಕೆ ಅನುಗುಣವಾಗಿ ಪೌಷ್ಠಿಕಾಂಶದ ಸ್ಥಿತಿಯಲ್ಲಿ ಸುಧಾರಣೆ ಸಾಧಿಸಲು ಪ್ರಯತ್ನಿಸುವ ಪೋಶಣ್​ ಅಭಿಯಾನ್ ಯೋಜನೆಯನ್ನು ಸರ್ಕಾರ ಜಾರಿಗೆ ತರುತ್ತಿದೆ ಎಂದು ಸಚಿವೆ ಸ್ಮೃತಿ ಇರಾನಿ ತಿಳಿಸಿದರು.

Minister for Women and Child Development Smriti Irani
ಲೋಕಸಭೆಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ

By

Published : Feb 7, 2020, 2:54 PM IST

ನವದೆಹಲಿ:5 ವರ್ಷದ ಒಳಗಿನ ಮಕ್ಕಳ ಸಾವಿಗೆ ಅಪೌಷ್ಠಿಕತೆಯೇ ನೇರ ಕಾರಣವಲ್ಲ ಎಂದು ಕೇಂದ್ರ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಹೇಳಿದರು.

ಈ ಬಗೆಗಿನ ಲಿಖಿತ ಪ್ರಶ್ನೆಯೊಂದಕ್ಕೆ ಲೋಕಸಭೆಯಲ್ಲಿ ಉತ್ತರ ನೀಡಿದ ಅವರು, ಅಪೌಷ್ಠಿ ಕತೆಯು ಸೋಂಕಿನ ಪ್ರತಿರೋಧ ಕಡಿಮೆ ಮಾಡುವ ಮೂಲಕ ಕಾಯಿಲೆ ಹಾಗೂ ಸಾವನ್ನು ಹೆಚ್ಚಿಸುತ್ತದೆ. ಆದರೆ, ಐದು ವರ್ಷದೊಳಗಿನ ಮಕ್ಕಳ ಸಾವಿಗೆ ಅಪೌಷ್ಠಿಕತೆ ನೇರ ಕಾರಣವಾಗಲ್ಲ. ಅಪೌಷ್ಠಿಕತೆ ನಿರ್ಮೂಲನೆಗೆ ಸರ್ಕಾರ ಸಾಕಷ್ಟು ಪ್ರಯತ್ನ ಮಾಡುತ್ತಿದೆ ಎಂದರು.

ಲೋಕಸಭೆಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ

ಅಪೌಷ್ಠಿಕತೆ ಒಂದು ಸಂಕೀರ್ಣ ಹಾಗೂ ಬಹು ಆಯಾಮದ ಸಮಸ್ಯೆ. ಬಡತನ ಮತ್ತು ಅಸಮಾನ ಆಹಾರ ವಿತರಣೆ ಸೇರಿ ಹಲವಾರು ಅಂಶಗಳಿಂದ ಸೃಷ್ಟಿಯಾಗುತ್ತದೆ. 0-6 ವರ್ಷದೊಳಗಿನ ಮಕ್ಕಳು, ಹದಿಹರೆಯದ ಹುಡುಗಿಯರು, ಗರ್ಭಿಣಿಯರು ಹಾಗೂ ಹಾಲುಣಿಸುವ ತಾಯಂದಿರಿಗೆ ಸಮಯಕ್ಕೆ ಅನುಗುಣವಾಗಿ ಪೌಷ್ಠಿಕಾಂಶದ ಸ್ಥಿತಿಯಲ್ಲಿ ಸುಧಾರಣೆಯನ್ನು ಸಾಧಿಸಲು ಪ್ರಯತ್ನಿಸುವ ಪೋಶಣ್​ ಅಭಿಯಾನ್ ಯೋಜನೆಯನ್ನು ಸರ್ಕಾರ ಜಾರಿಗೆ ತರುತ್ತಿದೆ ಎಂದರು.

ABOUT THE AUTHOR

...view details