ಕರ್ನಾಟಕ

karnataka

ETV Bharat / bharat

ಹೊಟ್ಟೆ ನೋವಿನಿಂದ ವಿಚಾರಣೆಗೆ ಬಾರದ ಪ್ರಗ್ಯಾ: ನಾಳೆ ಹಾಜರಾಗುವಂತೆ ಕಟ್ಟಪ್ಪಣೆ! - undefined

ಹೊಟ್ಟೆ ನೋವಿನ ​ ಕಾರಣ ಆಸ್ಪತ್ರೆ ಸೇರಿದ್ದ ಪ್ರಗ್ಯಾ ಒಂದು ವಾರದವರೆಗೆ ವಿನಾಯ್ತಿ ನೀಡುವಂತೆ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಆದರೆ ವಿಶೇಷ ಎನ್​ಐಎ ಜಡ್ಜ್​ ವಿ.ಎಸ್. ಪದಾಲ್ಕರ್ ಅವರು ನಾಳೆ ಹಾಜರಾಗಲೇಬೇಕೆಂದು ಸೂಚನೆ ನೀಡಿದ್ದಾರೆ.

ಪ್ರಗ್ಯಾ ಸಿಂಗ್ ಠಾಕೂರ್

By

Published : Jun 6, 2019, 2:46 PM IST

ಮುಂಬೈ​:ಮಲೆಗಾವ್​ ಸ್ಫೋಟ ಪ್ರಕರಣ ಸಂಬಂಧ ಇಂದು ಮುಂಬೈ ​ಕೋರ್ಟ್​ಗೆ ಹಾಜರಾಗಬೇಕಿದ್ದ ಭೋಪಾಲ್​ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್​ ಅನಾರೋಗ್ಯದ ಕಾರಣ ಒಂದು ದಿನದ ವಿನಾಯ್ತಿ ಪಡೆದಿದ್ದಾರೆ.

ಹೊಟ್ಟೆ ನೋವಿನ ​ಕಾರಣ ಆಸ್ಪತ್ರೆ ಸೇರಿದ್ದ ಪ್ರಗ್ಯಾ ಒಂದು ವಾರದವರೆಗೆ ವಿನಾಯ್ತಿ ನೀಡುವಂತೆ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಆದರೆ ವಿಶೇಷ ಎನ್​ಐಎ ಜಡ್ಜ್​ ವಿ.ಎಸ್. ಪದಾಲ್ಕರ್ ಅವರು ನಾಳೆ ಹಾಜರಾಗಲೇಬೇಕೆಂದು ಸೂಚನೆ ನೀಡಿದ್ದಾರೆ. ಅಲ್ಲದೆ, ಮೆಡಿಕಲ್​ ದಾಖಲೆಗಳನ್ನು ಸಲ್ಲಿಸದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದೂ ಹೇಳಿದ್ದಾರೆ.

ಆರೋಗ್ಯದ ಸಮಸ್ಯೆಯೊಂದಿಗೆ ಸಂಸತ್ತಿನ ಪ್ರಕ್ರಿಯೆಗಳನ್ನು ಪೂರೈಸಬೇಕಿದೆ ಎಂದೂ ಪ್ರಗ್ಯಾ ಕಾರಣ ನೀಡಿದ್ದರು. ಆದರೆ ಈ ಹಂತದ ವಿಚಾರಣೆಯಲ್ಲಿ ನೀವು ಭಾಗವಹಿಸಲೇಬೇಕು ಎಂದು ಕೋರ್ಟ್​ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇದೇ ಕಾರಣಕ್ಕೆ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದ ಪ್ರಗ್ಯಾ, ಇಂದು ಬೆಳಗ್ಗೆ ಮನೆಗೆ ತೆರಳಿದರು.

ಪ್ರಕರಣ ಸಂಬಂಧ ವಿಚಾರಣೆ ಎದುರಿಸುತ್ತಿರುವ ಏಳು ಆರೋಪಿಗಳಿಗೆ ವಾರದಲ್ಲಿ ಒಮ್ಮೆಯಾದರೂ ಕೋರ್ಟ್​ಗೆ ಹಾಜರಾಗುವಂತೆ ಕಳೆದ ತಿಂಗಳು ಕೋರ್ಟ್​ ಹೇಳಿತ್ತು.

For All Latest Updates

TAGGED:

ABOUT THE AUTHOR

...view details