ತಿರುವನಂತಪುರಂ: 28 ವರ್ಷದ ಮಲಿಯಾಳಂ ಚಿತ್ರ ನಿರ್ಮಾಪಕಿಯೊಬ್ಬಳು ಸಂಶಯಾಸ್ಪದವಾಗಿ ಮನೆಯಲ್ಲೇ ಮೃತಪಟ್ಟಿರುವ ಘಟನೆ ತಿರುವನಂತಪುರಂನಲ್ಲಿ ನಡೆದಿದೆ.
ಮನೆಯಲ್ಲೇ ಸಂಶಯಾಸ್ಪದವಾಗಿ ಮೃತಪಟ್ಟ ಯುವ ಸಿನಿಮಾ ನಿರ್ಮಾಪಕಿ - ತಿರುವನಂತಪುರಂ
ಕಳೆದ ಕೆಲ ತಿಂಗಳಿಂದ ಸಕ್ಕರೆ ಖಾಯಿಲೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ನಯನಾ ಸೂರ್ಯನ್ ಮನೆಯಲ್ಲೇ ಸಾವಿಗೀಡಾಗಿದ್ದಾರೆ.
ಕಳೆದ ಕೆಲ ತಿಂಗಳಿಂದ ಸಕ್ಕರೆ ಖಾಯಿಲೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ನಯನಾ ಸೂರ್ಯನ್ ಮನೆಯಲ್ಲೇ ಸಾವಿಗೀಡಾಗಿದ್ದಾರೆ. ಮಲಯಾಳಂ ಇಂಡಸ್ಟ್ರೀಯಲ್ಲಿ ಅನೇಕ ಚಿತ್ರಗಳಿಗೆ ಸಹ ನಿರ್ಮಾಪಕಿಯಾಗಿ ಕೆಲಸ ಮಾಡಿದ್ದಳು. ಆಕೆ ತಾಯಿ ಅನೇಕ ಸಲ ಮೊಬೈಲ್ಗೆ ಪೋನ್ ಮಾಡಿದ್ರೂ ಕಾಲ್ ಸ್ವೀಕರಿಸದೇ ಇದ್ದರಿಂದ, ಆಕೆಯ ಗೆಳೆಯರಿಗೆ ಹೇಳಿದ್ದು, ಅವರು ಹೋಗಿ ನೋಡಿದಾಗ ಸೂರ್ಯನ್ ಮೃತಪಟ್ಟಿರುವುದು ಗೊತ್ತಾಗಿದೆ. ಈಗಾಗಲೇ ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದ್ದು, ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
ಜನವರಿ 14ರಂದು ಈಕೆಯ ಮೆಂಟರ್ ಚಿತ್ರ ನಿರ್ಮಾಪಕ ಲೆನಿನ್ ರಾಜೇಂದ್ರನ್ ಸಾವು ಕೂಡ ಈಕೆಯ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಿತು ಎಂದು ತಿಳಿದು ಬಂದಿದೆ. ನಯನಾ ಅನೇಕ ಜಾಹೀರಾತು ಹಾಗೂ ವಿದೇಶಗಳಲ್ಲಿ ನಡೆದ ಸ್ಟೇಜ್ ಪ್ರದರ್ಶನಗಳಿಗೆ ನಿರ್ಮಾಪಕಿಯಾಗಿ ಸೇವೆ ಸಲ್ಲಿಸಿದ್ದರು.