ಕರ್ನಾಟಕ

karnataka

ETV Bharat / bharat

ವೈದ್ಯಕೀಯ ಉಪಕರಣಗಳ ಮೇಲಿನ ಜಿಎಸ್​ಟಿ ತೆರವುಗೊಳಿಸಿ: ರಾಗಾ ಒತ್ತಾಯ - ಜಿಎಸ್​ಟಿ ತೆರವಿಗೆ ರಾಹುಲ್ ಗಾಂಧಿ ಆಗ್ರಹ

ಕೊರೊನಾ ಸಾಂಕ್ರಾಮಿಕ ರೋಗ ಎದುರಿಸಲು ಬಳಸುವ ವೈದ್ಯಕೀಯ ಉಪಕರಣಗಳಿಗೆ ಯಾವುದೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ವಿಧಿಸಬಾರದೆಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

Make all COVID-19 related equipment GST-free
ಕೊರೊನಾ ವಿರುದ್ಧದ ಹೋರಾಟಕ್ಕೆ ಬಳಕೆಯಾಗುವ ವಸ್ತುಗಳ ಮೇಲಿನ ಜಿಎಸ್​ಟಿ ತೆರವುಗೊಳಿಸಿ

By

Published : Apr 20, 2020, 7:28 PM IST

ನವದೆಹಲಿ: ಕೋವಿಡ್ -19ಗೆ ಸಂಬಂಧಿಸಿದ ಎಲ್ಲ ಉಪಕರಣಗಳ ಮೇಲಿನ ಜಿಎಸ್‌ಟಿಯನ್ನು ತೆಗೆದು ಹಾಕಬೇಕೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸರ್ಕಾರ ಸ್ಯಾನಿಟೈಸರ್, ಸಾಬೂನು ಮತ್ತು ಮಾಸ್ಕ್​​ಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವಸೂಲಿ ಮಾಡುವುದು ತಪ್ಪು. ಕೊರೊನಾ ಸಾಂಕ್ರಾಮಿಕ ರೋಗದ ನಿರ್ವಹಣೆಗೆ ಸಂಬಂಧಿಸಿದ ಎಲ್ಲ ಸಣ್ಣ ಮತ್ತು ದೊಡ್ಡ ಸಲಕರಣೆಗಳ ಮೇಲೆ ಜಿಎಸ್​ಟಿ ವಿಧಿಸಬಾರದು ಎಂದು ನಾವು ನಿರಂತರವಾಗಿ ಒತ್ತಾಯಿಸುತ್ತಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.

ಸೋಂಕು ಮತ್ತು ಬಡತನದಿಂದ ಬಳಲುತ್ತಿರುವ ಜನರಿಂದ ಸ್ಯಾನಿಟೈಸರ್, ಸಾಬೂನು, ಮಾಸ್ಕ್​, ಕೈಗವಸು ಇತ್ಯಾದಿಗಳ ಮೇಲೆ ಜಿಎಸ್​ಟಿ ಸಂಗ್ರಹಿಸುವುದು ತಪ್ಪು. ಜಿಎಸ್​ಟಿ ಫ್ರೀ ಕೊರೊನಾ ಎಂಬ ನಮ್ಮ ನಿಲುವಿಗೆ ನಾವು ಬದ್ದರಾಗಿದ್ದೇವೆ ಎಂದು ಹೇಳಿದ್ದಾರೆ.

ಸರ್ಕಾರವು ಜಿಎಸ್​ಟಿ ವಿಧಿಸುತ್ತಿರುವ ವಸ್ತುಗಳ ಪಟ್ಟಿಯನ್ನು ರಾಹುಲ್ ಒದಗಿಸಿದ್ದಾರೆ. ಅದರ ಪ್ರಕಾರ, ಸ್ಯಾನಿಟೈಸರ್, ಲಿಕ್ವಿಡ್ ಹ್ಯಾಂಡ್ ವಾಶ್ ಮತ್ತು ಆಸ್ಪತ್ರೆ ಪೀಠೋಪಕರಣಗಳಾದ ಹಾಸಿಗೆಗಳು ಮತ್ತು ಪರೀಕ್ಷಾ ಬೆಂಚ್​ಗಳ ಮೇಲೆ ಶೆಕಡಾ 18 ರಷ್ಟು ಜಿಎಸ್​ಟಿ ವಿಧಿಸಲಾಗುತ್ತಿದೆ. ರಕ್ತ ಪರೀಕ್ಷೆ ಮಾಡುವ ಸ್ಟ್ರಿಪ್​ಗಳು, ವೈದ್ಯಕೀಯ ದರ್ಜೆಯ ಆಮ್ಲಜನಕ ಮತ್ತು ಹೈಡ್ರೋಜನ್ ಪರಾಕ್ಸೈಡ್ ಮೇಲೆ 12 ರಷ್ಟು ಜಿಎಸ್​​ಟಿ ವಿಧಿಸಿದ್ರೆ, ಮಾಸ್ಕ್​ಗಳು, ಜೀವ ರಕ್ಷಕ ಔಷಧಗಳು ಮತ್ತು ಕೆಲ ಲಸಿಕೆಗಳ ಮೇಲೆ 5 ರಷ್ಟು ತೆರಿಗೆ ವಿಧಿಸಲಾಗುತ್ತಿದೆ.

ABOUT THE AUTHOR

...view details