ಎರ್ನಾಕುಲಂ(ಕೇರಳ): ಅಲುವಾ ಎಡಾಯಾರ್ ಕೈಗಾರಿಕಾ ಪ್ರದೇಶದಲ್ಲಿ ದೊಡ್ಡ ಬೆಂಕಿ ಕಾಣಿಸಿಕೊಂಡ ಪರಿಣಾಮ ಎರಡು ಕಟ್ಟಡಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.
ಸ್ಯಾನಿಟೈಸರ್ ಕಾರ್ಖಾನೆಯಲ್ಲಿ ಭಾರಿ ಅಗ್ನಿ ಅವಘಡ: ಎರಡು ಕಟ್ಟಡಗಳು ಸಂಪೂರ್ಣ ನಾಶ - ಸ್ಯಾನಿಟೈಸರ್ ಕಾರ್ಖಾನೆಯಲ್ಲಿ ಬೆಂಕಿ
ಎರ್ನಾಕುಲಂನ ಅಲುವಾ ಎಡಾಯಾರ್ ಕೈಗಾರಿಕ ಪ್ರದೇಶದಲ್ಲಿನ ಸ್ಯಾನಿಟೈಸರ್ ಕಾರ್ಖಾನೆಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಎರಡು ಕಟ್ಟಡಗಳು ಸಂಪೂರ್ಣವಾಗಿ ನಾಶವಾಗಿವೆ.

ಸ್ಯಾನಿಟೈಸರ್ ಕಾರ್ಖಾನೆಯಲ್ಲಿ ಬೆಂಕಿ
ಮಾಹಿತಿ ತಿಳಿದು 30ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿ, ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.
ಸ್ಯಾನಿಟೈಸರ್ ಕಾರ್ಖಾನೆಯಲ್ಲಿ ಬೆಂಕಿ
ಪ್ರಾಥಮಿಕ ಮಾಹಿತಿ ಪ್ರಕಾರ, ಓರಿಯನ್ ಎಂಬ ಸ್ಯಾನಿಟೈಸರ್ ಕಾರ್ಖಾನೆಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗ್ತಿದೆ. ಭಾನುವಾರ ಮುಂಜಾನೆ 3 ಗಂಟೆ ಸುಮಾರಿಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಕೊಚ್ಚಿ ಮತ್ತು ಹತ್ತಿರದ ನಾಲ್ಕು ಜಿಲ್ಲೆಗಳ ಅಗ್ನಿಶಾಮಕ ದಳಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು.