ಏಟಾ:ನಿಂತ ವಾಹನಕ್ಕೆ ಕಾರೊಂದು ಗುದ್ದಿದ ಪರಿಣಾಮ ಒಂದೇ ಕುಟುಂಬದ ಐವರು ಸುಟ್ಟು ಕರಕಲಾಗಿರುವ ಘಟನೆ ಜಿಲ್ಲೆಯ ಬಾಗ್ವಾಲಾ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸುಟ್ಟು ಕರಕಲಾದರು! - ಐವರು ಬೆಂಕಿಗೆ ಆಹುತಿ
ನಿಂತ ವಾಹನಕ್ಕೆ ಕಾರೊಂದು ಡಿಕ್ಕಿ ಹೊಡೆದಿದ್ದು, ಒಂದೇ ಕುಟುಂಬದ ಐವರು ಸುಟ್ಟು ಕರಕಲಾಗಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ನಿಂತ ವಾಹನಕ್ಕೆ ಗುದ್ದಿದ ಕಾರು
ನೋಯ್ಡಾದಿಂದ ಏಟಾ ಜಿಲ್ಲೆಯ ರಾಮಪುರ ಗ್ರಾಮಕ್ಕೆ ಕುಟುಂಬವೊಂದು ಕಾರಿನಲ್ಲಿ ಪ್ರಯಾಣಿಸುತ್ತಿತ್ತು. ಈ ವೇಳೆ ಬಾಗ್ವಾಲಾ ಬಳಿ ನಿಂತ ವಾಹನಕ್ಕೆ ಕಾರು ಗುದ್ದಿದ್ದು, ರಭಸಕ್ಕೆ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ.
ಕಾರಿನಲ್ಲಿದ್ದ ಯುವತಿಯೊಬ್ಬಳು ಪ್ರಾಣಾಪಾಯದಿಂದ ಪಾರಾಗಿದ್ದು, ಸಂತೋಷ್, ವಿಮಲಾ, ಬಬಲೂ, ಲವಕುಶ ಮತ್ತು ಪೂನಂ ಸೇರಿ ಐವರು ಸುಟ್ಟು ಕರಕಲಾಗಿದ್ದಾರೆ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕಾರಿಗೆ ಬೆಂಕಿ ಹೊತ್ತಿಕೊಂಡಿರುವ ವಿಡಿಯೋ ವೈರಲ್ ಆಗಿದೆ.
Last Updated : Nov 23, 2019, 7:40 PM IST