ಭುವನೇಶ್ವರ: ರಾಜ್ಯದಲ್ಲಿ ಮತ್ತೆ 18 ಕೊರೊನಾ ಪ್ರಕರಣಗಳನ್ನು ಕಂಡು ಬಂದ ಹಿನ್ನೆಲೆ ಸಿಎಂ ನವೀನ್ ಪಟ್ನಾಯಕ್ ಅವರು ರಾಜ್ಯದ ಜನತೆಗೆ ಕಟ್ಟನಿಟ್ಟಿನ ಎಚ್ಚರಿಗೆ ನೀಡಿದ್ದಾರೆ. ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲದಿದ್ದರೆ ಕ್ರಿಮಿನಲ್ ಕೇಸ್ ಹಾಕಲಾಗುತ್ತದೆ ಎಂದು ಹೇಳಿದ್ದಾರೆ. ಒಡಿಶಾದಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 39ಕ್ಕೆ ಏರಿದೆ. ಹೆಚ್ಚಿನ ಪ್ರಕರಣಗಳು ಭುವನೇಶ್ವರದಿಂದಲೇ ವರದಿಯಾಗಿವೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಇಲ್ಲದಿದ್ರೇ ಕ್ರಿಮಿನಲ್ ಪ್ರಕರಣ.. - ರಾಜ್ಯದಲ್ಲಿ ಮತ್ತೇ 18 ಕೊರೊನಾ ಪ್ರಕರಣ
ಸಂಬಂಧಪಟ್ಟ ಅಂಗಡಿ, ಮಾರುಕಟ್ಟೆಗಳಿಗೆ ಮೊಹರು ಹಾಕಲಾಗುವುದು. ಕೊರೊನಾ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಜೊತೆಯಾಗಿ ಎಂದು ಮನವಿ ಮಾಡಿದ್ದಾರೆ. ಜನರು ಭಯಭೀತರಾಗಬೇಕಾಗಿಲ್ಲ, ಎಲ್ಲರೂ ಲಾಕ್ಡೌನ್ ನಿಯಮ ಪಾಲಿಸಿ.
ಒಡಿಶಾ ಸಿಎಂ ಖಡಕ್ ಎಚ್ಚರಿಕೆ
ಸಂಬಂಧಪಟ್ಟ ಅಂಗಡಿ, ಮಾರುಕಟ್ಟೆಗಳಿಗೆ ಮೊಹರು ಹಾಕಲಾಗುವುದು. ಕೊರೊನಾ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಜೊತೆಯಾಗಿ ಎಂದು ಮನವಿ ಮಾಡಿದ್ದಾರೆ. ಜನರು ಭಯಭೀತರಾಗಬೇಕಾಗಿಲ್ಲ, ಎಲ್ಲರೂ ಲಾಕ್ಡೌನ್ ನಿಯಮ ಪಾಲಿಸಿ. ಇದನ್ನು ಉಲ್ಲಂಘಿಸಿದವರ ವಿರುದ್ಧ ಪೊಲೀಸರು ಕಠಿಣಕ್ರಮ ತೆಗೆದುಕೊಳ್ಳುತ್ತಾರೆ ಎಂದು ಎಚ್ಚರಿಸಿದ್ದಾರೆ.